ಕವಿ-ಕತೆಗಾರ ಡಿ.ಎಸ್. ರಾಮಸ್ವಾಮಿ ಅವರ ’ಅನುಸಂಧಾನ’ ಪುಸ್ತಕದಲ್ಲಿ 53 ಅಂಕಣ ಬರೆಹಗಳಿವೆ. ವಾದ-ವಿವಾದ, ಅಸಹನೆಗಳೇ ಕೇಂದ್ರವಾಗಿರುವ- ಆಗುತ್ತಿರುವ ದಿನಗಳಲ್ಲಿ ಪರಸ್ಪರ ಮುಖಾಮುಖಿ-ಅನುಸಂಧಾನ ಅಪರೂಪವೇ ಆಗಿದೆ. ಚರ್ಚೆಯ ದಿಕ್ಕು ಸಾಗಬೇಕಾದ ರೀತಿ ’ಅನುಸಂಧಾನ’ದ ಮಾದರಿ ಎಂದು ಖಚಿತವಾಗಿ ನಂಬಿದ ಕವಿ ರಾಮಸ್ವಾಮಿ ಅವರು ಅದನ್ನು ತಮ್ಮ ಬರಹಗಳಲ್ಲಿ ದಾಖಲಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಂಘರ್ಷದ ಮೂಲಕ ಸಾಧಿಸುವ ಹಠ ಮಾಡುವವರೇ ವಿಫುಲವಾಗಿರುವ, ಮಾತು ಮಿತಿ ಮೀರಿದ ದಿನಗಳಲ್ಲಿ ಮಾತು-ಕತೆಯನ್ನು ಇಷ್ಟಪಡುವ ಬರೆಹಗಳು ಸಹಜವಾಗಿಯೇ ಪ್ರಿಯವಾಗುತ್ತವೆ.
ವರ್ತಮಾನಕ್ಕೆ ಮುಖಾಮುಖಿ ಆಗಿರುವ ಬರೆಹಗಳು ಕವಿಯ ಆಪ್ತನೋಟದ ಕಾರಣದಿಂದಾಗಿ ಗಮನ ಸೆಳೆಯುತ್ತವೆ. ವರ್ತಮಾನದಾಚೆಗೂ ಸಾಗುವ ಕ್ರಮ ವಿಭಿನ್ನವಾಗಿದೆ. ವೈಚಾರಿಕತೆಯು ಈ ಬರೆಹಗಳ ಹಿಂದಿರುವ ಶಕ್ತಿ. ಅದೇ ಬಹಳಷ್ಟು ಸಲ ಮಿತಿಯೇ ಆಗಿ ಬಿಡುವ ಅಪಾಯ ಇದ್ದೇ ಇರುತ್ತದೆ. ಅದನ್ನು ಮೀರುವ ಪ್ರಯತ್ನವನ್ನು ರಾಮಸ್ವಾಮಿ ಮಾಡಿದ್ದಾರೆ. ಕಾವ್ಯವನ್ನು ಬಗೆವ ಬಗೆ ರೀತಿಯ ಶುದ್ಧ ಸಾಹಿತ್ಯದ ಚರ್ಚೆ ಇರುವ ಹಾಗೆಯೇ ಹಿಂದಿ ಹೇರಿಕೆಯಂತಹ ಭಾಷಿಕ ನೆಲೆಯ ಚಿಂತನೆಯೂ ಇದೆ. ಅಸಹಿಷ್ಣುತೆ ಕುರಿತ ಬರೆಹದ ಆಶಯ ಚೆನ್ನಾಗಿದೆ. ಆದರೆ, ಕೊನೆಯಲ್ಲಿ ಅದು ಮಂಡಿತವಾಗುವ ಕ್ರಮ ಒಪ್ಪುವುದು ಕಷ್ಟ. ಮಾತೇ ದಾರಿ ತೋರುವ ದೀಪ. ಆದರೆ, ಗಲಿಬಿಲಿಗೆ ಒಳಗಾದಂತೆ ಕಾಣುವ ಬರವಣಿಗೆಯೂ ಮತ್ತಷ್ಟು ಖಚಿತತೆಯನ್ನು ಬಯಸುತ್ತದೆ. ಕಾವ್ಯದ ರೂಪಕದ ಭಾಷೆಯು ಗದ್ಯದಲ್ಲಿಯೂ ಪ್ರಿಯವಾಗದೇ ಇರದು. ಬರೆಯಲೇ ಬೇಕಾದ ಅನಿವಾರ್ಯ ತುರ್ತು ಅನುಭವಿಸಿ ಬರೆಯದಂತೆ ತಡೆಯುತ್ತದೆ. ಇದು ಸೃಜನಶೀಲರು ಎದುರಿಸುವ ಸವಾಲು. ರಾಮಸ್ವಾಮಿಯವರೂ ಆ ಸವಾಲನ್ನು ಎದುರಿಸಿದ್ದಾರೆ. ಹೊರಬರುವುದಕ್ಕೆ ಹೆಣಗಾಡಿದ್ದು ಮಾತ್ರ ಸ್ಪಷ್ಟವಾಗಿ ಕಾಣಿಸುತ್ತದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ 1965 ಮೇ 20ರಂದು ಶಿಕ್ಷಕ ಡಿ. ಶ್ರೀನಿವಾಸರಾವ್ ಮತ್ತು ಗಿರಿಜಮ್ಮ ದಂಪತಿಗಳ ಮೊದಲ ಮಗನಾಗಿ ಜನಿಸಿದರು. ತರೀಕೆರೆ, ಭದ್ರಾವತಿ, ಶಿವಮೊಗ್ಗೆಗಳಲ್ಲಿ ವಿದ್ಯಾಭ್ಯಾಸ, ವಾಣಿಜ್ಯದಲ್ಲಿ ಪದವಿ, ಕನ್ನಡ ಎಂಎ, ವಿಮೆ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲಮೋ, ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮದಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ. 1994ರಿಂದ ಅರಸೀಕೆರೆ ನಿವಾಸಿ. 'ಮರೆತ ಮಾತು' (2002) (ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಡಿ.ಸಿ.ಅನಂತಸ್ವಾಮಿ ಕಾವ್ಯ ಪ್ರಶಸ್ತಿ ಪಡೆದ ಕೃತಿ), 'ಉಳಿದ ಪ್ರತಿಮೆಗಳು (2007) (ಹಸ್ತಪ್ರತಿಗೆ ಕನ್ನಡ ಕಾವ್ಯ ಸಂದರ್ಭದ ಪ್ರತಿಷ್ಠಿತ ...
READ MORE