ಖ್ಯಾತ ವಿಮರ್ಶಕ ಆರ್. ಎಸ್ ವಿಜಯಶಂಕರ ಅವರ ಲೇಖನಗಳ ಸಂಕಲನ-ನುಡಿಸಸಿ. ಈ ಕೃತಿಗೆ ಬೆನ್ನುಡಿ ಬರೆದ ಚಂದ್ರಶೇಖರ ಪಾಟೀಲರು ‘ಸಮಕಾಲೀನ ಸಂಗತಿಗಳನ್ನು ನಿಮಿತ್ತವಾಗಿ ಇರಿಸಿಕೊಂಡೂ ಕಾಲ-ದೇಶಗಳ ಗೆರೆ ಮೀರಿ ಗಂಭೀರ ಚಿಂತನೆಗೆ ಅವಕಾಶ ಮಾಡಿಕೊಡುವ ವಿಜಯಶಂಕರ ಅವರ ಅಂಕಣ ಬರಹಗಳು ಯಾವುದೇ ನಿಯತಕಾಲಿಕ ಸಾಹಿತ್ಯ ಪತ್ರಿಕೆಗಳಲ್ಲೂ ಬರುವಂಥವು. ಅನವಶ್ಯಕ ಕ್ಲಿಷ್ಟತೆಯಾಗಲಿ, ಪಾಂಡಿತ್ಯ- ಪ್ರದರ್ಶನವಾಗಲಿ ಇಲ್ಲದೆ ಓದುಗನನ್ನು ತನ್ನೊಂದಿಗೆ ಕೈಹಿಡಿದು ಕರೆದುಕೊಂಡು ಹೋಗುವ ಹೃದ್ಯವಾದ ಶೈಲಿ ವಿಜಯಶಂಕರ ಅವರದು. ಈ ಅಧ್ಯಯನದ ಬೀಸು ಬಹಳ ದೊಡ್ಡದು. ದೇಶಿ- ವಿದೇಶಿ , ಪ್ರಾಚೀನ- ಅರ್ವಾಚೀನ ಎಂಬ ಯಾವ ಸೀಮಾರೇಖೆಯೂ ಇಲ್ಲಿಲ್ಲ. ಒಂದು ಒಳನೋಟ ಇನ್ನೊಂದಕ್ಕೆ ಹಾದಿ ಮಾಡುತ್ತಾ ಓದುಗರನ್ನು ಸಹಜ ಲಯದಲ್ಲಿ ಕರಕೊಂಡು ಹೋಗುವ, ತನ್ನ ಅನುಭವವನ್ನು ಅದರಲ್ಲೂ ಹಂಚಿಕೊಳ್ಳುವ ರೀತಿಯ ನಿರೂಪಣಾ ವಿಧಾನವಾಗಿದೆ ’ ಎಂದು ಪ್ರಶಂಸಿಸಿದ್ದಾರೆ.
ಖ್ಯಾತ ಬರಹಗಾರ ಕೆ.ವಿ ತಿರುಮಲೇಶ್ ಅವರು ಈ ಕೃತಿಯ ಕುರಿತು ‘ವಿಜಯಶಂಕರ ಅವರ ಬರಹಗಳಲ್ಲಿ ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಜನಾಂಗ ಪ್ರಗತಿಗೊಳ್ಳುವುದು ಅಸಾಧ್ಯ ’ ಎಂಬುದನ್ನು ಗುರುತಿಸಿ ಪ್ರಶಂಸಿಸಿದ್ದಾರೆ. .
©2024 Book Brahma Private Limited.