ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ.ಪ್ರಶಸ್ತಿ ಪಡೆದ ಕೃತಿ ಜ್ಯೋತಿ ಗುರುಪ್ರಸಾದ್ ಅವರ ’ಈ ಕ್ಷಣ’. ಇದು ಅಗ್ನಿ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಂಕಣ ಬರಹಗಳ ಸಂಕಲನ. 26 ಕಂತುಗಳಲ್ಲಿ, ಹದಿನೈದು ದಿನಕ್ಕೊಮೆಯಂತೆ ಹೆಚ್ಚೂಕಡಿಮೆ ಒಂದು ವರ್ಷ ಕನ್ನಡಿಗರನ್ನು ತಮ್ಮ ವಿಶಿಷ್ಟ ಒಳನೋಟಗಳ ಮೂಲಕ ಹಿಡಿದಿಟ್ಟವರು ಜ್ಯೋತಿ.
’ಅಗ್ನಿ’ಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಪತ್ರಕರ್ತ ಬಸವರಾಜು ವರ್ಣಿಸುವಂತೆ ಇಲ್ಲಿ ’ಸುಪ್ರಭಾತದ ಸುಬ್ಬುಲಕ್ಷ್ಮಿಯಿಂದ ಹಿಡಿದು ಅಮೃತಾ ಪ್ರೀತಂವರೆಗೆ, ಕವನ ಕಣ್ಬಿಡುವ ಹೊತ್ತಿನಿಂದ ಹತ್ಯೆಯಾಗುವ ಪ್ರೇಮದವರೆಗೆ, ಬಾಲ್ಯದ ನೆನಪುಗಳಿಂದ ಬುದ್ಧ ಬಾಹುಬಲಿಯವರೆಗೆ, ಡಾ.ರಾಜ್ ಅವರ ಮಾಂತ್ರಿಕತೆಯಿಂದ ಸುಬ್ಬಣ್ಣನವರ ಹೆಗ್ಗೋಡಿನವರೆಗೆ’ ಎಲ್ಲವೂ ಉಂಟು.
ಸೂಕ್ಷ್ಮ ಸಂವೇದನೆಯಿಂದ ಬರೆಯುವ ಜ್ಯೋತಿ ಗುರುಪ್ರಸಾದ್ (1965) ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಆರ್.ಜ್ಯೋತಿ ಎಂಬ ಹೆಸರಿನ ಇವರ ಕಾವ್ಯನಾಮ ಜ್ಯೋತಿ ಗುರುಪ್ರಸಾದ. ಟಿ. ನರಸೀಪುರ ಮೂಲದವರಾದ ಅವರು ಟಿ. ನರಸೀಪುರ, ಮಂಡ್ಯ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಗೃಹಸ್ಥ ಜೀವನಕ್ಕೆ ಕಾಲಿಟ್ಟು ಕಾರ್ಕಳಕ್ಕೆ ಬಂದರು. ಕಾರ್ಕಳದ ಭುವನೇಂದ್ರ ಕಾಲೇಜು, ಕ್ರೈಸ್ಟ್‌ಕಿಂಗ್ ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಕಾರ್ಕಳದ ಎಸ್.ವಿ.ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜ್ಯೋತಿ ಅವರ ಮೊದಲ ಕವನ ಸಂಕಲನ’ಚುಕ್ಕಿ’ ...
READ MORE