ಬರಗೂರು ಅವರು ದಿನಪತ್ರಿಕೆಗೆ ಬರೆದ ಅಂಕಣಗಳ ಸಂಗ್ರಹವಿದು. ಸಾಹಿತ್ಯ, ಸಿನಿಮಾ, ಸಂಸ್ಕೃತಿ, ಭಾಷೆಗೆ ಸಂಬಂಧಿಸಿದ ಬರೆಹಗಳಿವೆ. ಬರಗೂರು ರಾಮಚಂದ್ರಪ್ಪ ಅವರ ಬಹುಪಾಲು ಬರಹಗಳ ಕೇಂದ್ರ ಶ್ರಮ ಸಂಸ್ಕೃತಿ. ಸಾಮಾನ್ಯರ ಬೆವರಿನಿಂದ ಸಮಾಜ ಮತ್ತು ಸಂಸ್ಕೃತಿ ರೂಪುಗೊಂಡಿದೆ ಎಂಬುದು ನಿಲುವು. ಅವರ ನಿಲುವು ಇಲ್ಲಿನ ಬರಹಗಳಲ್ಲಿ ಸಾಕಾರಗೊಂಡಿದೆ. ನಿಯಮಿತ ಕಾಲಾವಧಿಯಲ್ಲಿ ಬರೆದಿರುವ ಬರೆಹಗಳಾದರೂ ತಮ್ಮ ಗುಣಮಟ್ಟದ ಕಾರಣದಿಂದ ದೈನಿಕ ಬವಣೆಯಿಂದ ಬಿಡುಗಡೆಗೊಂಡಿವೆ.
ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...
READ MORE