ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಂಕಣ ಬರಹಗಳ ಸಂಗ್ರಹವೇ ’ವರ್ತಮಾನ’.
ಲೇಖಕರು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣಬರಹಗಳಲ್ಲಿ ಒಂದು ವರ್ಷಾವಧಿಯ ಬರಹಗಳನ್ನು ಸಂಕಲಿಸಿ ಈ ಕೃತಿಯನ್ನು ಹೊರತಂದಿದ್ದಾರೆ.
ಭ್ರಷ್ಟಾಚಾರ : ಜನರ ಸೋಲಿಸುವ ನೇತಾರ, ಕೆರಳಿದ ಕರುಳ ದನಿ ಅಂಬೇಡ್ಕರ್, ಚರಿತ್ರೆಯೊಳಗೆ ಪುರಾಣ, ಪುರಾಣದೊಳಗೆ ಚರಿತ್ರೆ, ಸಾಂಸ್ಕೃತಿಕ ಸಾಧಕ, ಸಾಮಾಜಿಕ ರೂಪಕ, ರಾಷ್ಟ್ರಕವಿ ವಿವಾದಕ್ಕೆ ವಿರೋಧಾಭಾಸದ ವರದಿ, ಸ್ವಚ್ಛಭಾರತ ಅಭಿಯಾನ ಹುರುಕು ಬಾಯಿಗೂ ಅನ್ವಯಿಸಲಿ, ಭಾಷಾಭಿಮಾನದ ಹೆಸರಿನಲ್ಲಿ ಬೀದಿ ಜಗಳ, ಬದುಕು ಕಲಿಸಿದ ಗುರುಗಳನ್ನು ಗೌರವಿಸುತ್ತಾ, ನರಸಿಂಹರಾಜು ಎಂಬ ವಿನೋದ ನಾಯಕ ನಟ, ಜಾಗತೀಕರಣದ ಜೊತೆಗಾರ : ಜಾಹಿರಾತೀಕರಣ, ತಾಯ್ತನವನ್ನು ಕಳೆದುಕೊಳ್ಳುತ್ತಿರುವ ಸಮಾಜ, ಯೋಗವನ್ನು ಭೋಗವಾಗಿಸುತ್ತಿರುವ ಭಾರತ, ರಾಮಾಯಣ, ಮಹಾಭಾರತಗಳು ನಾಶವಾಗುವುದಿಲ್ಲ, ಕನ್ನಡ ಮಾತಿಗೆ ಕಾರ್ಯಸೂಚಿ ಕೊಟ್ಟ ಬಿ.ಎಂ.ಶ್ರೀ, ಮಗು ಅಳುತ್ತಿದೆ; ಇನ್ನೂ ಅಳುತ್ತಲೇ ಇದೆ, ಅಕಡೆಮಿಕ್ ವಲಯಕ್ಕೂ ಬಂದ ಬಾಯಿಬಾಕತನ ಇನ್ನೂ ಹಲವಾರು ವೈಚಾರಿಕ ಬರಹಗಳನ್ನು ಈ ಪ ’ವರ್ತಮಾನ’ ಪುಸ್ತಕ ಒಳಗೊಂಡಿದೆ.
ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...
READ MORE