ಕೇದಿಗೆ ಗರಿ

Author : ಮಂಜುಳ ಡಿ

₹ 90.00




Year of Publication: 2020
Published by: ತೇಜು ಪಬ್ಲಿಕೇಷನ್ಸ್
Address: ನಂ 1014 , 24 ನೇ ಮುಖ್ಯರಸ್ತೆ, 16 ನೇ ಕ್ರಾಸ್ಬಿ ಎಸ್ ಕೆ 2 ನೇ ಹಂತ , ಬೆಂಗಳೂರು- 560070
Phone: 9900195626

Synopsys

‘ಕೇದಿಗೆ ಗರಿ’ ಕೃತಿಯು ಮಂಜುಳ ಡಿ ಅವರ ಅಂಕಣ ಬರಹಗಳ ಸಂಕಲನ. ಇಲ್ಲಿನ ಲೇಖನಗಳಲ್ಲಿ ಮನದಾಳದ ತುಡಿತಗಳು ಪುಟಿದೆದ್ದು, ಬೇರೊಂದು ಲೋಕವನ್ನೇ ಸೃಷ್ಟಿಸುವಂತಿದೆ. ಇಲ್ಲಿ ಪ್ರಾಮಾಣಿಕತೆ ಇದೆ, ಹೃದಯ ಸ್ಪಂದನೆ ಇದೆ, ಸಮಾಜದ ಕುರಿತು ಕಳಕಳಿ ಇದೆ. ಇತಿಹಾಸದ ಕುರಿತು ಹೆಮ್ಮೆ ಇದೆ. ಬೀದಿ ಬೀದಿಯಲ್ಲಿ ಉರುಳಿ ಬಿದ್ದ ಮರ, ಅದು ನೀಡುತ್ತಿದ್ದ ಗಾಳಿಯ ಮೌಲ್ಯ, ಕಾಡಿನ ಮಧ್ಯೆ ಅಜ್ಞಾನದ ಕೂಪದಲ್ಲಿ ಸಿಲುಕಿದ್ದ ಮಹಿಳೆಯರ ದಿನಚರಿಯಲ್ಲಿ ಬೆಳಕು ತರಲು ಪ್ರಯತ್ನಿಸಿದ ತುಳಸಿ ಮುಂಡಾ, ಜಗತ್ತಿನ ಅತಿ ಎತ್ತರದ ಪ್ರದೇಶದ ಕುರಿತ ಚಿತ್ರಣವಿದ್ದು, ಸೈನಿಕರ ವೀರಗಾಥೆಯನ್ನು ಸಾರುವ ಬರಹಗಳೇ ಇಲ್ಲಿನ ಜೀವಾಳವಾಗಿದೆ. ಇಲ್ಲಿಯ ಲೇಖನಗಳು ಶೋಷಿತರ, ದಮನಿತರ ಪರ ಹೋರಾಡುವ ಸಹಾನುಭೂತಿಯ ಧ್ವನಿಯಾಗಿ ಮೂಡಿದೆ.

About the Author

ಮಂಜುಳ ಡಿ

ಲೇಖಕಿ ಮಂಜುಳ ಡಿ. ಅವರು ಉದಯವಾಣಿ ಪತ್ರಿಕೆಯ ಅಂಕಣಕಾರರು. ಈ ಅಂಕಣಗಳ ಬರಹಗಳನ್ನು ಸಂಗ್ರಹಿಸಿ ಅವರು ನಿನಾದವೊಂದು ಎಂಬ ಕೃತಿ ರಚಿಸಿದ್ದಾರೆ.  ...

READ MORE

Reviews

‘ಕೇದಿಗೆ ಗರಿ’ ಕೃತಿಯ ವಿಮರ್ಶೆ

ಮನದಾಳದ ತುಡಿತವೊಂದು , ಇನ್ನು ಅಲ್ಲೇ ಉಳಿದಿರಲಾರೆ ಎಂದು ಪುಟಿದೆದ್ದು ಬಂದು, ಅಕ್ಷರ ರೂಪ ಪಡೆದಾಗ ಆಪ್ತ ಎನಿಸುವ ಬರಹವೊಂದು ಮೂಡಿಬರುತ್ತದೆ. ಮಂಜುಳಾ ಅವರ ಬರಹಗಳನ್ನು ಓದಿದಾಗ ಅನಿಸಿದ ಭಾವ ಇದು. ಇಲಲಿ ಪ್ರಾಮಾಣಿಕತೆ ಇದೆ, ಹೃದಯ ಸ್ಪಂದನೆ ಇದೆ, ಸಮಾಜದ ಕುರಿತು ಕಳ ಕಳಿ ಇದೆ, ಇತಿಹಾಸದ ಕುರಿತು ಹೆಮ್ಮೆ ಇದೆ. ಬೀದ ಬೀದಿಯಲ್ಲಿ ಉರುಳಿ ಬಿದ್ದ ಮರ, ಅದು ನೀಡುತ್ತಿದ್ದ ಗಾಳಿಯ ಮೌಲ್ಯ, ಕಾಡಿನ ನಡುವೆ ಅಜ್ಞಾನದ ಕೂಪದಲ್ಲಿ ಸಿಲುಕಿದ್ದ ಮಹಿಳೆಯರ ದಿನಚರಿಯಲ್ಲಿ ಬೆಳಕು ತರಲು ಪ್ರಯತ್ನಿಸಿದ ತುಳಸಿ ಮುಂಡಾ, ಜಗತ್ತಿನ ಅತಿ ಎತ್ತರದ ಪರ್ವತವನ್ನು ಏರಿದ ಶೆರ್ಪಾ, ಸಾವಿರಾರು ಸೈನಿಕರನ್ನು ಎದುರಿಸಿ ವೀರಸ್ವರ್ಗ ಸೇರಿದ ಆ 21 ಜನ ಸಿಖ್ ಸೈನಿಕರು ಇಂತಹ ಕಥನಗಳಿಗೆ ಪ್ರತಿಸ್ಪಂದಿಸುವ ಬರೆಹಗಳೇ ಈ ಸಂಕಲನದ ಶಕ್ತಿಯಾಗಿದೆ. ವರ್ತಮಾನದ ಮತ್ತು ಇತಿಹಾಸದ ಹೃದಯಸ್ಪರ್ಶಿ ಘಟನೆಗಳಿಗೆ, ಕಥನಗಳಿಗೆ ತೀವ್ರವಾಗಿ ಸ್ಪಂದಿಸುವ ಮನಸ್ಸೊಂದು ತನ್ನ ಭಾವನೆಗಳನ್ನು ತೋಡಿಕೊಂಡಾಗ ಮೂಡಿಬಂದ ಇಲ್ಲಿನ ಬರಹಗಳು ಅನನ್ಯ. ಮಂಜುಳಾ ಅವರ ಇಲ್ಲಿನ ಬರಹಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರದಾನ ಎನಿಸುವ ಒಂದು ಎಳೆಯನ್ನು ಗುರುತಿಸಬಹುದು. ಅದೇ ಶೋಷಿತರ ದಮನಿತರ ಪರ ಹೊರಡುವ ಸಹಾನುಭೂತಿಯ ಧ್ವನಿ, ಅಂತಹ ಅಸಹಾಯಕರಿಗೆ ಅನ್ಯಾಯವಾಗುತ್ತಿದೆ. ಅದನ್ನು ತಡೆಯಲು ನಾವೂ ನೀವೂ ಏನಾದರೂ ಮಾಡಬೇಕಲ್ಲವೆ ಎಂಬ ಮಾನವೀಯ ಕಳಕಳಿಯ ಧ್ವನಿ. ಇದನ್ನೇ ಅಲ್ಲವೇ ಸಕಾರಾತ್ಮಕ ಆಶಯ ಎನ್ನುವುದು!

(ಬರಹ ; ಶ. ಹಾ, ಕೃಪೆ ; ವಿಶ್ವವಾಣಿ)

Related Books