ಹಣದ ಝಣತ್ಕಾರ ಪ್ರೀತಿಗೆ ಸಂಚಕಾರ

Author : ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Pages 107

₹ 80.00




Year of Publication: 2022
Published by: ಸಾಹಿತ್ಯ ಸಿರಿ
Address: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ

Synopsys

‘ಹಣದ ಝಣತ್ಕಾರ ಪ್ರೀತಿಗೆ ಸಂಚಕಾರ’ ಕೃತಿಯು ತರಳಬಾಳು ಜಗದ್ಗುರು ಹಾಗೂ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅಂಕಣ ಬರಹಗಳ ಸಂಕಲನವಾಗಿದೆ. ಪವಾಡಗಳ ಅಂತರಂಗ, ಮಾತು ಬೆಳ್ಳಿಯೇ ಮೌನ ಬಂಗಾರವೇ?, ಬೆಟ್ಟವೇರಿ ಬಂದಳು ಭದ್ರೆ!, ಅಂತರಂಗ ಶುದ್ಧಿ- ಬಹಿರಂಗ ಶುದ್ಧಿ, ಹಲ್ಲಿನ ಸುತ್ತ ಒಂದು ವಿಚಾರ ಲಹರಿ, ಪಾದ್ರಿಯೊಬ್ಬರು ಶಾಸ್ತ್ರಿಗಳ ಮನೆಗೆ ಬಂದಾಗ, ಅಂತರ್ಜಾಲ ವರ್ಗಾವಣೆಯ ಮಹಾಪರ್ವ, ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಕೈಗೊಂಡ ಭರವಸೆಯ ಕಾಲ್ನಡಿಗೆ, ಬದುಕಿನ ಒಳನೋಟದಿಂದ ಮೂಡಿಬರುವ ಅನುಭಾವ ಸಾಹಿತ್ಯ, ಪ್ರಜಾಸತ್ತೆಯಲ್ಲಿ ‘ಸತ್ತೆ’ ಎಂದು ಗೋಳಿಡುವ ಪ್ರಜೆ!, ಜಗವೆಲ್ಲ ಅಳುತಿರಲು ನೀ ನಗುತ ಹೋಗು!, ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ, ಮೌನದಲುಂಬುದು ಆಚಾರವಲ್ಲ, ಪ್ರೀತಿಯ ಮಂದಾನಿಲ ಬೇಕೋ ಸೇಡಿನ ದಾವಾನಲ ಬೇಕೋ? ಹೀಗೆ ಅನೇಕ ಅಂಕಣ ಬರಹಗಳು ಇಲ್ಲಿ ಸೇರಿಕೊಂಡಿವೆ.

About the Author

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರ್ನಾಟಕದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಕಾರಿಗಳು. ಒಂದು ಧಾರ್ಮಿಕ ಪೀಠದ ಸಮಸ್ತ ಕಾರ್ಯಚಟುವಟಿಕೆಗಳ ಸುಸೂತ್ರ ನಿರ್ವಹಣೆಗೆ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಭಾರತ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಳವಸಿಕೊಂಡು, ಇಂದಿಗೂ ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತೀಯ ಪರಂಪರೆಯಿಂದ ಬಂದ ಸಾಂಪ್ರದಾಯಿಕ ಜ್ಞಾನ ಮತ್ತು ಪಾಶ್ಚಿಮಾತ್ಯ ಆಧುನಿಕ ತಂತ್ರಜ್ಞಾನ ಎರಡನ್ನೂ ವಿಶಿಷ್ಟ ರೀತಿಯಲ್ಲಿ ಬೆರೆಸಿ ಹದಗೊಳಿಸಿಕೊಂಡು ಬಳಸುತ್ತಿರುವ ಇವರ ಸಾಧನೆಗಳು ಹಲವಾರು. ಸಂಸ್ಕೃತ ವ್ಯಾಕರಣ ಕುರಿತು ಆಧುನಿಕ ರೀತಿಯಲ್ಲಿ ಅಧ್ಯಯನ ನಡೆಸಲು ಅನುವುಮಾಡಿಕೊಡುವ ಇವರ ‘ಗಣಕಾಷ್ಟಾಧ್ಯಾಯಿ’ ತಂತ್ರಾಂಶ ಮತ್ತು ...

READ MORE

Related Books