ವನ್ಯಜೀವಿ, ಅಭಯಾರಣ್ಯ, ಪರಿಸರ ಕುರಿತ ವಿಶೇಷ ವರದಿಗಾರಿಕೆ ವಿಭಾಗದ ಪತ್ರಕರ್ತರಾದ ವಿನೋದ್ ಬಿ ನಾಯಕ್ ಅವರು ಬರದ ಅಂಕಣಗಳ ಸಂಕಲನ ಜಂಗಲ್ ಡೈರಿ. ಪ್ರಕೃತಿ ಮಾನವರ ನಡುವಿನ ಸಂಬಂಧವನ್ನು ಮಾನವ ದುರಾಸೆಗೆ ಕಟ್ಟುಬಿದ್ದು ಹಾಳು ಮಾಡಿಕೊಳ್ಳುತ್ತಿರುವುದು, ಪರಿಸರ ನಾಶ ಮಾಡುತ್ತಿರುವುದು ವನ್ಯಜೀವಿಗಳ ಬದುಕು ಅವಸನದ ಅಂಚಿಗೆ ತಲುಪಿರುವುದು ಹೀಗೆ ಲೇಖಕರು ಕಾಡು-ನಾಡಿನ ನಂಟನ್ನು ಕೃತಿಯಲ್ಲಿ ವಿವರಿಸಿದ್ದಾರೆ. ಕಾಡು ಬೆಳೆಸುವುದಲ್ಲ, ಇರುವ ಕಾಡನ್ನೇ ನಾಶ ಮಾಡುತ್ತಿರುವ ಬಗ್ಗೆ ಧ್ವನಿ ಎತ್ತಿರುವ ಲೇಖಕರು ಒಟ್ಟಾರೆ ಕಾಡಿನಲ್ಲಿದ್ದ ಪ್ರಾಣಿಗಳು ನಾಡಿಗೆ ಬರುತ್ತಿರುವುದು, ಅವುಗಳಿಗೆ ಸೂರಿಲ್ಲದಂತೆ ಮಾಡಿರುವುದರ ಕುರಿತು ಬರೆದಿದ್ದಾರೆ.
ಪತ್ರಕರ್ತ, ಲೇಖಕ ವಿನೋದ್ ಕುಮಾರ್ ಬಿ. ನಾಯ್ಕ್ ಅವರು ವನ್ಯಜೀವಿ, ಅಭಯಾರಣ್ಯ, ಪರಿಸರ ಕುರಿತ ವಿಶೇಷ ವರದಿಗಾರಿಕೆಯಲ್ಲಿ ಕಾರ್ಯ ನಿರ್ವಹಿಸಿದವರು. ಪ್ರಸ್ತುತ ಕನ್ನಡಪ್ರಭ ದಿನಪತ್ರಿಕೆಯಲ್ಲಿ ‘ಸಹಾಯಕ ಸಂಪಾದಕ’ರಾಗಿದ್ದಾರೆ. ಪರಿಸರ ನಾಶ, ವನ್ಯಜೀವಿಗಳ ಅವಸಾನದ ಕುರಿತು ಬೆಳಕು ಚೆಲ್ಲಿದ ಅವರ ಅಂಕಣ ಬರಹಗಳ ಸಂಗ್ರಹ ‘ಜಂಗಲ್ ಡೈರಿ’ 2019ರಲ್ಲಿ ಪ್ರಕಟಿತ. ‘ಸಂತ ಸೇವಾಲಾಲರ ವಿಶೇಷ ಸಂಚಿಕೆಯ ಪರಿಕಲ್ಪನೆ ಮತ್ತು ನಿರ್ವಹಣೆ ಮಾಡಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ...
READ MORE