ಅನುಭವ ಮಂಟಪ

Author : ಅಂಶಿ ಪ್ರಸನ್ನಕುಮಾರ್‌

Pages 220

₹ 175.00




Year of Publication: 2017
Published by: ಶ್ರೀ ರಾಜೇಂದ್ರ ಪ್ರಿಂಟರ್ ಅಂಡ್ ಪಬ್ಲಿಷರ್
Address: # 12/1, ಇವ್ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು-570001
Phone: 0821-2476019

Synopsys

ಪ್ರಚಲಿತ ವಿದ್ಯಮಾನ ಕುರಿತ ಅಂಕಣ ಬರಹಗಳು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಅರವತ್ಮೂರು ಬರಹಗಳನ್ನು ಒಳಗೊಂಡಿರುವ ಸಂಕಲನವಿದು.  ವರ್ತಮಾನದ ತುರ್ತುಗಳಿಗೆ ಪ್ರತಿಕ್ರಿಯಿಸುವ ಪತ್ರಕರ್ತ ಸಹಜವಾಗಿಯೇ ವರ್ತಮಾನದ ಭಾಗವೇ ಆಗಿರುತ್ತಾನೆ. ನಿನ್ನೆ-ನಾಳೆಗಳ ಹಂಗಿಲ್ಲದಂತೆ ಭಾಸವಾದರೂ ನಿನ್ನೆಯ ನೆನಪಿನ ಭಾರ ಮತ್ತು ನಾಳೆಯ ಕನಸಿನ ಎಚ್ಚರಗಳೆರಡನ್ನೂ ವರ್ತಮಾನ ತನ್ನೊಳಗೆ ಹಿಡಿದಿರಿಸಿಕೊಂಡಿರುತ್ತದೆ. ಚರಿತ್ರೆ ಮತ್ತು ಭವಿಷ್ಯಗಳ ನಡುವಿನ ತೆಳುವಾದ ಪ್ರದೇಶದಲ್ಲಿ ಆಡುವುದು ಎಂತಹವರಿಗಾದರೂ ಸವಾಲು. ಅಂಶಿ ಪ್ರಸನ್ನಕುಮಾರ್ ಅವರು ವರ್ತಮಾನದ ಘಟನೆಗಳನ್ನು ಕೇವಲ ದಾಖಲಿಸುವ ಕೆಲಸ ಮಾಡುವುದಿಲ್ಲ. ಬದಲಿಗೆ ಅವುಗಳಿಗೆ ತಮ್ಮದೇ ಆಲೋಚನಾ ಕ್ರಮದ ಪ್ರತಿಕ್ರಿಯೆಯನ್ನೂ ದಾಖಲಿಸುತ್ತಾರೆ. ಕೇವಲ ಸಾಕ್ಷಿ ಮಾತ್ರ ಆಗಿ ನಿರ್ದಿಷ್ಟ ಅಂತರ ಅಥವಾ ದೂರ ನಿಂತು ವರದಿ ಮಾಡುವ ವರದಿಗಾರ/ಪತ್ರಕರ್ತ ’ಅಂಕಣ ಬರಹ’ದಂತಹ ಅರೆಪತ್ರಕರ್ತೀಯ ಬರವಣಿಗೆ ಮಾಡುವಾಗ ವಿಶಿಷ್ಟ ಸವಾಲು ಎದುರಿಸಬೇಕಾಗುತ್ತದೆ. ಅದನ್ನಿಲ್ಲಿ ಅಂಶಿ ಅವರು ನಿವಾರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಮಾಧ್ಯಮಲೋಕದಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳು-ಬೆಳವಣಿಗೆಗಳು ಅಂಕಣ ಬರಹದ ಸ್ವರೂಪವನ್ನು ಹಿಂದೆಂದಿಗಿಂತ ಭಿನ್ನವಾಗಿಸಿವೆ. ಆಯಾಕಾಲಕ್ಕೆ ಅನುಗುಣವಾಗಿ ಬರೆದ ಅಂಕಣ ಬರಹಗಳು ಏಕಕಾಲಕ್ಕೆ ಅಂದಿನ ತುರ್ತು ಅಗತ್ಯವನ್ನು ಪೂರೈಸುವ ಹಾಗೂ ಆ ಕಾಲ ಗತಿಸಿದ ನಂತರದ ಓದಿಗೂ ಅನುವು ಮಾಡಿಕೊಡುವಂತಿರಬೇಕಾಗುತ್ತದೆ. ವರ್ತಮಾನದ ಹಂಗಿನಲ್ಲಿ ಬರೆದ ಬರಹಗಳು ಎದುರಿಸಬೇಕಾದ ಮಿತಿಯಿದು. ಅಂಶಿಯವರನ್ನು ಮಿತಿಯನ್ನ ಮೀರುವ ಪ್ರಯತ್ನ ಮಾಡಿದ್ದಾರೆ. ರಾಜಕೀಯ ಸಂಗತಿಗಳಿಗೆ ಇರುವ ಅಲ್ಪಾಯಸ್ಸು ಅವರ ಆಯ್ಕೆ ಆಗಿರುವುದರಿಂದ ಸಹಜವಾಗಿಯೇ ಅದು ಅಡ್ಡಿಯನ್ನುಂಟು ಮಾಡುತ್ತದೆ. ವೈವಿಧ್ಯಮಯ ವಿಷಯಗಳು ಆಯಾ ಕಾಲದ ಬೆಳವಣಿಗೆಗಳನ್ನು ಅಕ್ಷರರೂಪದಲ್ಲಿ ದಾಖಲಿಸುವ ಚಾರಿತ್ರಿಕ ದಾಖಲೆಯಾಗಿ ಈ ಗ್ರಂಥವನ್ನು ಪರಿಗಣಿಸಬಹುದು. ಪತ್ರಿಕಾ ಬರವಣಿಗೆಯಾಚೆಗೆ ಹೋಗುವುದು ಸಾಧ್ಯವಾಗಿಲ್ಲ.

About the Author

ಅಂಶಿ ಪ್ರಸನ್ನಕುಮಾರ್‌

ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನ ಕುಮಾರ್, ಪ್ರಸ್ತುತ ಕನ್ನಡ ಪ್ರಭಾ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ, ಕೋಟಿ ನೆನಪು ಕೋಟಿ ಓದುಗರ ಆಂದೋಲನ, ಸಮಾಜಮುಖಿ ಶ್ರೀಸಾಮಾನ್ಯರು, ಸಮುದಾಯ ನಾಯಕರು; ಇವು  ಪ್ರಮುಖ ಕೃತಿಗಳು. ಬೆಂಗಳೂರು ಪ್ರೆಸ್ ಕ್ಲಬ್‌ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ. ...

READ MORE

Related Books