‘ಚಿಂತನಾಂಕಣ’ ಕೃತಿಯು ಸಂಕಮ್ಮ ಜಿ. ಸಂಕಣ್ಣನವರ ಅವರ ಅಂಕಣ ಬರಹಗಳ ಸಂಕಲನ. ಲೇಖಕಿಯು ತಮ್ಮ ಬದುಕಿನಲ್ಲಿ ಕಂಡುಂಡ ಅನುಭವಗಳನ್ನು ಅಚ್ಚುಕಟ್ಟಾಗಿ ಓದುಗರಿಗೆ ತಲುಪಿಸಿದ್ದಾರೆ. ಇದು ನನ್ನ ಚಿಂತನೆ ಎಂದು ಎಲ್ಲಿಯೂ ಹೇರಿಕೆ ಮಾಡದೆ, ಅತ್ಯಂತ ಸಹಜವಾಗಿ, ಎಂಥವರಿಗೂ ಅರ್ಥವಾಗುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ. ಅಲ್ಲಲ್ಲಿ ತಮ್ಮ ಕುಟುಕು ಮಾತಿನಿಂದ ಲೇಖಕಿಯರ ಬಗೆಗೆ ಸಾಹಿತ್ಯ ವಲಯದಲ್ಲಿ ಇರುವ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಲೇಖಕಿ ಸಂಕಮ್ಮ ಜಿ. ಸಂಕಣ್ಣನವರ ಅವರು ಬಿ.ಎಸ್ಸಿ. ಹಾಗೂ ಎಂ.ಎ. ಪದವೀಧರರು. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ 10-08-1956 ರಂದು ಜನಿಸಿದರು. ತಂದೆ ಪುಟ್ಟಪ್ಪ ಮೋಟೆ ಬೆನ್ನೂರ, ತಾಯಿ-ಪಾರ್ವತಮ್ಮ. ಕೃತಿಗಳು: ಜೋಡಿಹಕ್ಕಿ (2004, ಕವನ ಸಂಕಲನ) , ಮುತ್ತಿನ ತೆನೆ (2005, ಹನಿಗವನ), ವಚನಸೃಷ್ಟಿ (2005, ಆಧುನಿಕ ವಚನಗಳು), ವಚನ (2010, ಆಧುನಿಕ ವಚನಗಳು), ಸೂರ್ಯಪ್ರಭ (2009), ಅಭಿನಂದನಾ ಗ್ರಂಥ) , ಧರೆಗಿಳಿದ ಧನ್ವಂತರಿ (2009, ಸಂಪಾದನೆ), ಕನ್ನಡದ ಕಣ್ಮಣಿ-2009, ಡಾ. ಮಹದೇವ ಬಣಕಾರ (2009, ಜೀವನ ಚರಿತ್ರೆ) , ಬ್ಯಾಡಗಿರಾಯರು (2011, ಸಂಪಾದನೆ), ಹೋರಾಟದ ಒಂದು ನೋಟ (2011, ಸಿದ್ದಮ್ಮ ಮೈಲಾರರ ಬದುಕು). ಪ್ರಶಶ್ತಿ-ಗೌರವಗಳು: ನಾಡರತ್ನ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಹಾವೇರಿಯ ಮಹದೇವ ...
READ MORE