‘ಮಿನುಗು ಮಿಂಚು’ ಕಿಶೋರ ಸಾಹಿತಿ ಅಂತಃಕರಣ ಅವರ ಅಂಕಣ ಪ್ರಬಂಧ ಸಂಕಲನ. ಲೇಖಕರು ಕಂಡಿರುವ ಸರಳ ಸಂಗತಿಗಳನ್ನು ಇಲ್ಲಿ ದಾಖಲಿಸಿದ್ದಾರೆ. ಬೆಂಗಳೂರಿಗೆ ಹೋಗಿದ್ದು, ಭಾಷಣ ಮಾಡುವ ತಯಾರಿ, ಹೊಸದಾಗಿ ಶಾಲೆಗೆ ಹೋಗಿದ್ದು, ತನ್ನ ಹಳೆಯ ಶಿಕ್ಷಕರು, ಶಾಲೆಗೆ ಹೊಸದಾಗಿ ಸೇರಿದ್ದು, ಅಪ್ಪ-ಅವ್ವನ ಸಂವಾದ ಎಲ್ಲವನ್ನೂ ಪ್ರವಾಸ ಭಾಗದಲ್ಲಿ ಬರೆದಿದ್ದಾರೆ. ಶಾಲೆ, ಪ್ರವಾಸ, ಸಿನೆಮಾ, ತಂತ್ರಜ್ಞಾನ, ಕನಸು ಎಂಬ ಐದು ವಿಭಾಗದ ಲೇಖನಗಳು ಈ ಪುಸ್ತಕದಲ್ಲಿವೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE