ಹಿರಿಯ ಪತ್ರಕರ್ತ ಹಾಗೂ ಲೇಖಕ ಡಾ. ಪಾಟೀಲ ಪುಟ್ಟಪ್ಪನವರು ರಚಿಸಿದ ಕೃತಿ-ಅನುಭವ ಇರುವಲ್ಲಿ ಅಮತತ್ವವಿದೆ. ಪಾಟೀಲ ಪುಟ್ಟಪ್ಪನವರು ಪ್ರಪಂಚ ವಾರಪತ್ರಿಕೆಯನ್ನು ನಡೆಸುತ್ತಿದ್ದಾಗ ಪ್ರತಿವಾರವೂ ಅವರು ತಮ್ಮ ಅನುಭವದ ಮಾತುಗಳನ್ನು ‘ಅನುಭವ ಇರುವಲ್ಲಿ ಅಮೃತತ್ವವಿದೆ’ ಎಂಬ ಅಂಕಣದಲ್ಲಿ ದಾಖಲಿಸುತ್ತಿದ್ದರು. ಅವನ್ನೆಲ್ಲ ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದೇ ಈ ಕೃತಿ. ಇಲ್ಲಿಯ ವಿಚಾರಗಳು ಅನುಭವಜನ್ಯವಾಗಿದ್ದರಿಂದ ಗಾದೆಗಳ ಸ್ವರೂಪವನ್ನು ತಾಳಿವೆ. ಚಿಕ್ಕವಾದರೂ ಚೊಕ್ಕವಾದ ಹಾಗೂ ಸುದೀರ್ಘ ಅರ್ಥ ವಿವರಣೆಯ ಸಾಮರ್ಥ್ಯವನ್ನು ಒಳಗೊಂಡಿವೆ. ಹತಾಶೆಗೊಂಡ ಬದುಕಿನ ದಾರಿದೀಪದಂತೆ ಈ ಅನುಭವದ ಮಾತುಗಳು ಬದುಕಿನ ಪ್ರೀತಿಯನ್ನು ಹೆಚ್ಚಿಸುತ್ತವೆ.
`ಪಾಪು’ ಎಂದೇ ಚಿರಪರಿಚಿತರಿರುವ ಪಾಟೀಲ ಪುಟ್ಟಪ್ಪ ಅವರು ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡವರು. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದವರು. ತಂದೆ ಸಿದ್ಧಲಿಂಗಪ್ಪ-ತಾಯಿ ಮಲ್ಲಮ್ಮ. 1922ರ ಜನೆವರಿ 4ರಂದು ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. 1949ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು. ‘ವಿಶಾಲ ಕರ್ನಾಟಕ’ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ‘ನವಯುಗ’ ಮಾಸಪತ್ರಿಕೆ ...
READ MORE