‘ಒಳಗಿದ್ದರೂ ಹೊರಗುಳಿದವರು’- ಬಿಸಿಲ ಬೆಳಕು-1 ಲೇಖಕ ಹಾಲತಿ ಸೋಮಶೇಖರ್ ಅವರ ಅಂಕಣ ಬರಹಗಳ ಸಂಕಲನ. ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ 'ಅನಿಲ ಬೆಳಕು' ಅಂಕಣದ ಮೊದಲ ಕೆಲವು ಬರೆಹಗಳು ಇಲ್ಲಿ ಸಂಕಲಿತವಾಗಿವೆ.
ಇಂದಿಗೂ ಜ್ವಲಂತ ಸಮಸ್ಯೆಯಾಗಿ ಉಳಿದಿರುವ ತಬ್ಬಲಿ ಜಾತಿಗಳ ಶೋಷಣೆಯ ಒಳ-ಹೊರಗಿನ ನೋವಿನ ನೋಟವನ್ನು ಶಕ್ತಿಯುತವಾಗಿ, ಗಂಭೀರವಾದ ಚಿಂತನೆಯ ಹೆಜ್ಜೆ ಗುರುತುಗಳಿಂದ ತಲಸ್ಪರ್ಶಿಯಾಗಿ ಇಲ್ಲಿ ಚರ್ಚಿಸಿದ್ದಾರೆ ಮತ್ತು ವಿಶ್ಲೇಷಿಸಿದ್ದಾರೆ.
ಖ್ಯಾತ ಕತೆಗಾರ-ಪತ್ರಕರ್ತ ಪಿ. ಲಂಕೇಶ್ ಅವರ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿರುವ ಡಾ. ಹಾಲತಿ ಸೋಮಶೇಖರ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹಾಲತಿಯವರು. 1963ರ ಫೆಬ್ರುವರಿ 25ರಂದು ಜನಿಸಿದ ಅವರು ಎಂ.ಎ., ಪಿಎಚ್.ಡಿ., ಎಂ.ಎಡ್. ಮಾಡಿ ಶಿಕ್ಷಣಾಧಿಕಾರಿ ಆಗಿದ್ದಾರೆ. ಪಿ. ಲಂಕೇಶ, ಮಹಿಳಾ ಚಳವಳಿ, ಸ್ತ್ರೀಪರ, ಓದುವ ಸುಖ, ಸಾಯೋಆಟ-ವಿಮರ್ಶೆ (ವಿಮರ್ಶೆ) ಅವರ ಪ್ರಕಟಿತ ಕೃತಿಗಳು. ಪಿ. ಲಂಕೇಶ ಸಾಹಿತ್ಯ ಅವರ ಪಿಎಚ್.ಡಿ. ಮಹಾಪ್ರಬಂಧ. ...
READ MORE