ಲೇಖಕಿ ಆಶಾ ಜಗದೀಶ್ ಅವರ ಅಂಕಣ ಬರಹಗಳ ಸಂಗ್ರಹ ‘ನಾದಾನುಸಂಧಾನ’. ಕೃತಿಗೆ ಬೆನ್ನುಡಿ ಬರೆದಿರುವ ಶಾಂತಿ ಕೆ. ಅಪ್ಪಣ್ಣ ಅವರು “ಯಾವ ವಿಷಯದ ಕುರಿತಾಗಿ ಬರೆದರೂ ಅಷ್ಟೊಂದು ಆಳವಾಗಿ, ಆಪ್ತವಾಗಿ ಬರೆಯಬಲ್ಲ, ಒಂದು ಓದಿಗೇ ಹಿಡಿದು ನಿಲ್ಲಿಸಬಲ್ಲ ನೈಪುಣ್ಯತೆ ಅವರಿಗೆ ಕರಗತವಾಗಿದೆ. ಅದು ನಮ್ಮ ಪಾಲಿನ ಅದೃಷ್ಟವೆಂದೇ ಹೇಳಬೇಕು. ಆಶಾ ಅವರ ಅಂಕಣ ಬರಹಗಳು, ನಮ್ಮನ್ನು ಮೇಲ್ಮೇಲೆ ತೇಲಿಸಿದಂತೆ ಕರೆದೊಯ್ಯುವುದಿಲ್ಲ, ಆಳಕ್ಕಿಳಿಸುತ್ತವೆ. ಚಿಂತನೆಗೆ ಹಚ್ಚುತ್ತವೆ. ಒಂದು ವಿಷಯದ ಕುರಿತಾಗಿ ಬೇರೊಂದು ಕೋನದಿಂದ ನೋಡುವಂತೆ ಪ್ರೇರೇಪಿಸುತ್ತವೆ” ಎಂದು ಶ್ಲಾಘಿಸಿದ್ದಾರೆ.
ಕವಯತ್ರಿ ಆಶಾ ಜಗದೀಶ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಲವಾರು ಕತೆ, ಲೇಖನ, ಕವಿತೆ, ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ಮೌನ ತಂಬೂರಿ’ ಅವರ ಚೊಚ್ಚಲ ಕವನ ಸಂಕಲನ. ...
READ MORE