‘ನನ್ನ ಕನಸಿನ ಕ್ರಿಕೆಟ್’ ಕಿಶೋರ ಬರಹಗಾರ ಅಂತಃಕರಣ ಅವರ ಕ್ರಿಕೆಟ್ ಕುರಿತ ಅಂಕಣ ಪ್ರಬಂಧಗಳ ಸಂಕಲನ. ಎಳೆ ವಯಸ್ಸಿನ ಕುತೂಹಲದಿಂದ ಇಲ್ಲಿ ಅಂತಃಕರಣ ಕ್ರಿಕೆಟ್ ಆಟವನ್ನು ವಿಶ್ಲೇಸಿದ್ದಾರೆ. ಅಂತಃಕರಣನಿಗೆ ಅನೇಕ ಆಟಗಳ ಬಗ್ಗೆ ಮತ್ತು ಮತ್ತು ದೇಶ ವಿದೇಶದ ಕ್ರೀಡಾಕೂಟಗಳ ಬಗ್ಗೆ ಇರುವ ಅಗಾಧ ತಿಳಿವಳಿಕೆ ಅಲ್ಲದೆ ಆಟವನ್ನು ಕಡು ವ್ಯಾಮೋಹದಿಂದ ಪ್ರೀತಿಸುವ ಮನೋಭಾವ, ಬರಹವನ್ನು ಆಕರ್ಷಕವಾಗಿ ನಿರೂಪಿಸಬೇಕೆಂಬ ಆಸೆ ಜೊತೆಗೆ ತಾನು ಗ್ರಹಿಸಿದ್ದನ್ನು ನಿರೂಪಿಸುವಾಗ ವ್ಯಕ್ತಪಡಿಸುವ ಆತ್ಮಸ್ಥೈರ್ಯ ಎಲ್ಲವೂ ಕೃತಿಯನ್ನು ಓದಿಸಿಕೊಳ್ಳುತ್ತವೆ. ಈ ಕೃತಿಯಲ್ಲಿ ಸಮಕಾಲೀನ ಕ್ರೀಡಾಕೂಟಗಳ ಬಗ್ಗೆ ಅಧಿಕಾರಯುತವಾಗಿ ಬರೆದಿರುವ ಲೇಖನಗಳಿವೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE