ಜಿ. ಎಸ್. ಸದಾಶಿವ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮಗಳ ಹಾದಿಯಲ್ಲಿ ನಡೆದವರು. ಸಂವೇದನಾಶೀಲತೆಯಲ್ಲಿಯೂ ಸಂಯಮದಿಂದ ಬರೆದ, ಬದುಕಿದ ಅವರ ಸಜ್ಜನಿಕೆಯನ್ನು ಅವರ ಬರವಣಿಗೆಯಲ್ಲೂ ಕಾಣಬಹುದು. ತಮ್ಮ ಕಾಲದ ರಾಜಕೀಯಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದವರು. ಸುಧಾ ವಾರಪತ್ರಿಕೆಯಲ್ಲಿ ಅವರು ಬರೆದ ವಾರೆನೋಟ ಅಂಕಣ ಆ ಕಾಲದ ರಾಜಕೀಯ- ಸಾಮಾಜಿಕ ಪರಿಸ್ಥಿತಿಗೆ ತಿಳಿಹಾಸ್ಯದ ವ್ಯಾಖ್ಯಾನದಂತೆ ಇದೆ. ಇವರ ವಾರೆನೋಟ ಅಂಕಣದಲ್ಲಿ ಬಂದಂತಹ ಎಲ್ಲಾ ಪಾತ್ರಗಳು ಜೀವಂತವಾಗಿ ಪ್ರಸ್ತುತ ಸಮಾಜದಲ್ಲಿ ಸದಾ ಇರುವಂತದ್ದೇ ಆಗಿದೆ.
ಕನ್ನಡಕ್ಕೆ ವಿಶಿಷ್ಟವೆನಿಸುವ ಕಥೆಗಳನ್ನು ಕೊಟ್ಟು ನವ್ಯ ಸಾಹಿತ್ಯ ಚಳವಳಿಗೆ ಹೊಸಕಳೆ ಜೋಡಿಸಿದ ಜಿ.ಎಸ್. ಸದಾಶಿವ ಅವರ ಊರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಭಾರಂಗೀ ಹೋಬಳಿ ಗುಂಡಮನೆ, ತಂದೆ ಶ್ರೀಪಾದರಾಯರು, ತಾಯಿ ಲಲಿತಮ. ಅವರದು ಕೃಷಿಕ ಕುಟುಂಬ. ತಾಯಿಯ ತೌರೂರು ಗಿಂಡೀಮನೆಯಲ್ಲಿ ಸದಾಶಿವ ಜನಿಸಿದ್ದು 1939ರ ಸೆಪ್ಟೆಂಬರ್ 13ರಂದು. ಈಗ ಗುಂಡೂಮನೆಯೂ ಇಲ್ಲ: ಗಿಂಡೀಮನೆಯೂ ಇಲ್ಲ. ಶರಾವತಿ ನದಿಯ ಆ ದಂಡೆ, ಈ ದಂಡೆ ಊರುಗಳಾದ ಇವು ಶರಾವತಿ ಅಣಿಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿವೆ. ಊರ ಮಗ್ಗುಲ ಹಾಂಸೆ ಎಂಬಲ್ಲಿದ್ದ ಸರ್ಕಾರಿ ಪ್ರಾಥಮಿಕ ಏಕೋಪಾಧ್ಯಾಯ ಶಾಲೆಯಲ್ಲಿ ಅವರ ಪ್ರಾಥಮಿಕ ...
READ MORE