‘ನ್ಯಾನೋ ಹೇನು’ ವಿಜ್ಞಾನ ಲೇಖಕ ನಾಗೇಶ ಹೆಗಡೆ ಅವರ ಅಂಕಣ ಬರಹಗಳ ಸಂಕಲನ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ವಿಜ್ಞಾನ ವಿಶೇಷ ಅಂಕಣ ಬರಹಗಳ ನಾಲ್ಕನೇ ಸಂಕಲನ ಈ ಕೃತಿ. ಇಲ್ಲಿ ತಲ್ಲಣ ಹುಟ್ಟಿಸಿದ ನ್ಯಾನೊಹೇನು, ಹೋಮಿಯೋಪಥಿಯ ಅಡ್ಡಪರಿಣಾಮ, ಇಷ್ಟೆಲ್ಲ ಮಾಡುವುದು ಯಾರ ಹೊಟ್ಟೆಗಾಗಿ, ರೋಗ ಪತ್ತೆಗೆ ಇ-ಮೂರು ಆ-ಮೂಗು, ನೀರೊಳಗೆ ಹೊಸ ಚೀನಾ ಗೋಡೆ, ಗ್ರಹಕ್ಕೆ ಅನ್ಯ ಜೀವಿಗಳ ಲಬ್ಬೆ, ಕಸ ಕರಗಿಸುವ ಕನಸಿನ ಯಂತ್ರ, ಭೂಗರ್ಭಕ್ಕೆ ವಜ್ರದ ಬಾಣ, ಜೀವಾಸ್ತ್ರ ತಜ್ಞರ ದರ್ಪ, ಇದು ಚೀನಾದ ಚೆರ್ನೋಬಿಲ್, ಈ ಸಮೂಹ ಸನ್ನಿಗೆ ಔಷಧವೆಲ್ಲಿ, ಕೊರೊನಾ ವೈರಸ್ ನ ಉಪಲಾಭಗಳು, ಪಾತಾಳದಲ್ಲಿ ಬಾಹ್ಯಾಕಾಶ ಶೋಧ, ಹೆಣವಾಗಿ ಬೀಳುವ ರಣಹದ್ದುಗಳು, ಪಾತಾಳದಲ್ಲಿ ಬಾಹ್ಯಾಕಾಶ ಶೋಧ ಸೇರಿದಂತೆ 54 ಲೇಖನಗಳು ಸಂಕಲನಗೊಂಡಿವೆ.
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...
READ MORE