ತಮ್ಮ ಕಾದಂಬರಿ-ಕತೆಗಳ ಮೂಲಕ ಸಾಹಿತ್ಯಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ತೇಜಸ್ವಿನಿ ಹೆಗಡೆ ಅವರು ಪತ್ರಿಕೆಗೆ ಬರೆದಿರುವ ಅಂಕಣ ಬರೆಹಗಳು ಈ ಸಂಕಲನದಲ್ಲಿವೆ. ದೈಹಿಕ ನ್ಯೂನತೆಗಳನ್ನು ಮೀರಿ ಹೇಗೆ ಬದುಕು ಕಟ್ಟಿಕೊಳ್ಳಬೇಕು ಎಂಬ ಧನಾತ್ಮಕ ಚಿಂತನೆಗಳಿರುವ ಬರೆಹಗಳಿವು. ಈ ಬರೆಹಗಳಲ್ಲಿ ವೈಕಲ್ಯದ ಮಿತಿಗಳ ಮೀರಲು ಹೇಗೆ ಕುಟುಂಬ ಹಾಗೂ ಸಮಾಜದ ಭಾಗವಾಗಿರುವ ವ್ಯಕ್ತಿಗಳ ಪ್ರತಿಕ್ರಿಯೆ-ನೆರವು ಸಹಾಯಕವಾಗುವ ಅಂಶವನ್ನು ಈ ಬರೆಹಗಳು ಒಳಗೊಂಡಿವೆ.
ಲೇಖಕಿ ತೇಜಸ್ವಿನಿ ಹೆಗ್ಗಡೆ ಮೂಲತಃ ಉತ್ತರ ಕನ್ನಡದ ಶಿರಸಿಯವರು. ಪ್ರಸ್ತುತ ಬೆಂಗಳೂರು ನಿವಾಸಿಗಳು. ತಂದೆ ಡಾ. ಜಿ.ಎನ್. ಭಟ್, ತಾಯಿ ಜಯಲಕ್ಷಿ ಭಟ್. ಮಂಗಳೂರಿನ ಕೆನರಾ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಪೂರೈಸಿರುವ ತೇಜಸ್ವಿನಿ, ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕನ್ನಡ) ಎಂ.ಎ ಪದವೀಧರರು. ಕೃತಿಗಳು: ಚಿಗುರು (ಕವನ ಸಂಕಲನ), ಹಂಸಯಾನ ಕಾದಂಬರಿ- 2017), ಪ್ರಶಸ್ತಿ-ಪುರಸ್ಕಾರಗಳು: ಆಳ್ಳ್ವಾಸ್ ನುಡಿಸಿರಿಯ ಗೌರವಧನ ಪುರಸ್ಕಾರಕ್ಕೆ ಆಯ್ಕೆ, 2018 ರಲ್ಲಿ ಹಂಸಯಾನ ಕಾದಂಬರಿಗೆ ʼಮಾಸ್ತಿ ಪುರಸ್ಕಾರ’, ಲಭಿಸಿದೆ. ...
READ MORE