ಪ್ರಜಾವಾಣಿ ಪತ್ರಿಕೆಯಲ್ಲಿ ನಿರಂತರವಾಗಿ ‘ಕರುಣಾಳು ಬಾ ಬೆಳಕೆ‘ ಶೀರ್ಷಿಕೆಯಡಿ ಡಾ. ಗುರುರಾಜ ಕರಜಗಿ ಅವರು ಬರೆಯುತ್ತಿದ್ದ ಅಂಕಣ ಲೇಖನಗಳ ಬರಹಗಳ ಈ ಕೃತಿ. ಅಂಕಣ ಲೇಖನಗಳ ಭಾಗ-7. ನೀತಿ ಕಥೆಗಳ ಮೂಲಕ ಜನಸಾಮಾನ್ಯರ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ, ಜೀವನದಲ್ಲಿ ನೀತಿಯ ಅಳವಡಿಕೆಯ ಮಹತ್ವವನ್ನು ಪ್ರತಿಪಾದಿಸುವ ಕಳಕಳಿ ಕಾಣಬಹುದು. ಈ ಲೇಖನಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ತೀರಾ ಲಘು ಬರೆಹಗಳ ಮೂಲಕವೇ ಜೀವನದ ಗಂಭೀರತೆಯನ್ನು, ಬದುಕು ಸಾರ್ಥಕಪಡಿಸಿಕೊಳ್ಳುವ ಮಾರ್ಗವನ್ನು ಇವು ಬೋಧಿಸುತ್ತವೆ. ಹೀಗಾಗಿ, ಲೇಖನಗಳು ಓದುಗರಿಗೆ ಆಪ್ತವೆನಿಸುತ್ತವೆ.
©2024 Book Brahma Private Limited.