ಲೇಖಕಿ ಸಹನಾ ಕಾಂತಬೈಲು ಅವರ ಪ್ರಬಂಧಗಳ ಸಂಕಲನ-ಆನೆ ಸಾಕಲು ಹೊರಟವಳು. ಬಹುತೇಕ ಲೇಖನಗಳು ಉದಯವಾಣಿ ದಿನಪತ್ರಿಕೆಗೆ ಬರೆದ ಅಂಕಣ ಬರಹಗಳಾಗಿವೆ. ಕೃಷಿ ಮಹಿಳೆಯ ಸಾಹಸವನ್ನು ವಿವರಿಸುವ ಒಟ್ಟು 26 ಪ್ರಬಂಧಗಳಿವೆ. ಆಹಾರ ಸಿಗದ ಕಾರಣ ಕಾಡಿನಿಂದ ನಾಡಿಗೆ ನುಗ್ಗುವ ಪ್ರಾಣಿಗಳು ವಿಶೆಷವಾಗಿ ಆನೆಗಳು, ಅವುಗಳನ್ನು ಓಡಿಸಲು ಹಾಕಿದ ವಿದ್ಯುತ್ ತಂತಿಗಳು, ಇವುಗಳ ಪರಿವೇ ಇಲ್ಲದ ಆನೆಗಳು ವಿದ್ಯುತ್ ತಂತಿ ಬೇಲಿಗೆ ಸಿಕ್ಕಿ ಸಾಯುವುದು ಹೀಗೆ ಆನೆಗಳ ಕುರಿತೇ ವಿವಿಧ ಪ್ರಬಂಧಗಳಿದ್ದು, ಕೃತಿಗೂ ‘ಆನೆ ಸಾಕಲು ಹೊರಟವಳು’ ಎಂಬ ಶೀರ್ಷಿಕೆ ನೀಡಿದ್ದರ ಬಗ್ಗೆ ಲೇಖಕಿ ಸ್ಪಷ್ಟಪಡಿಸಿದ್ದಾರೆ.
ಜೇನು ಕೃಷಿ ಬಗ್ಗೆ , ಹಂಡೆ ನೀರಿನ ಸ್ನಾನದ ಬಗ್ಗೆ , ಮನೆಯಲ್ಲಿ ವಿದ್ಯುತ್ ತಯಾರಿಸಿದ ಬಗ್ಗೆ .. ಹೀಗೆ ಹಲವಾರು ಪ್ರಬಂಧ ಗಳು ಮಣ್ಣಿನ ವಾಸನೆ ಬೀರುತ್ತವೆ . ಖ್ಯಾತ ಲೇಖಕ ನಾಗೇಶ್ ಹೆಗಡೆ ಅವರು ಕೃತಿಗೆ ಮುನ್ನುಡಿ ಬರೆದಿದ್ದಾರೆ. ಮನಸಿಗೆ ಮುದ ನೀಡುವ ತಿಳಿವಳಿಕೆ ಹೆಚ್ಚಿಸುವ ಬರಹಗಳು .ಕೃತಿಯಲ್ಲಿವೆ.
©2024 Book Brahma Private Limited.