ಕನ್ನಡ ಪ್ರಾಧ್ಯಾಪಕರಾಗಿರುವ ಕೋ.ವೆಂ. ರಾಮಕೃಷ್ಣೇಗೌಡರು ತಮ್ಮ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಕೋ.ವೆಂ. ಅವರು ಕನ್ನಡಪರ ಚಟುವಟಿಕೆ ಮತ್ತು ಚಳುವಳಿಯಲ್ಲಿ ಮುಂಚೂಣಿಯಲ್ಲಿ ಇರುವವರು. ಅವರೊಬ್ಬ ಪ್ರಾಧ್ಯಾಪಕ, ಲೇಖಕ ಮತ್ತು ಕ್ರಿಯಾಶೀಲ ವ್ಯಕ್ತಿ.
ಚಿಗುಳಿ ಎಂಬ ಅಂಕಣ ಬರಹಗಳ ಸಂಕಲನದಲ್ಲಿ ಕೋ.ವೆಂ. ಅವರು ಬರೆದ ೨೯ ಲೇಖನಗಳನ್ನು ಸಂಕಲಿಸಲಾಗಿದೆ. ಕನ್ನಡ ಭಾಷೆ, ಸಂಸ್ಕೃತಿ, ಶಿಕ್ಷಣ- ಮಾಧ್ಯಮ, ಸಾಹಿತ್ಯ, ಪರಿಷತ್ತು ಕಾರ್ಮಿಕರ ತಲ್ಲಣ, ಪೊಲೀಸರು, ಪ್ರಜಾಪ್ರಭುತ್ವ, ಗಾಂಧೀಜಿ ಹೀಗೆ ಹತ್ತು ಹಲವು ವಿಷಯಗಳನ್ನು ಕುರಿತು ಬರೆದಿದ್ದಾರೆ. ಆ ಪೈಕಿ ಕನ್ನಡ ಭಾಷೆ ಮತ್ತು ಅದರ ಅಸ್ತಿತ್ವದ ಪ್ರಶ್ನೆ, ಎದುರಿಸುತ್ತಿರುವ ಸವಾಲುಗಳು, ಕಂಡುಕೊಳ್ಳಬೇಕಾದ ದಾರಿಯ ಬಗೆಗಿನ ಲೇಖನಗಳೇ ಸಿಂಹಪಾಲು. ಶಿಕ್ಷಣ ಮತ್ತು ಕನ್ನಡ ಎಂಬುದು ಮುಖ್ಯ ಫೋಕಸ್ ಆಗಿದೆ. ಈ ಸಂಕಲನದ ಎಲ್ಲ ಬರವಣಿಗೆಗಳಲ್ಲಿ ಕೋ.ವೆಂ. ಅವರ ಕನ್ನಡ ಪ್ರೀತಿ ಮತ್ತು ಅದನ್ನು ಉಳಿಸಿಕೊಳ್ಳಲು ಹಾಗೂ ಬೆಳೆಸಲು ಸಾಗಬೇಕಾದ ದಾರಿಯ ಬಗೆಗಿನ ವಿಚಾರಗಳು ಢಾಳಾಗಿ ಎದ್ದು ಕಾಣಿಸುತ್ತವೆ. ಭಾಷಿಕ ಭಯೋತ್ಪಾದನೆ, ಹಿಂದಿಯ ಹೇರಿಕೆ, ಸಂಸ್ಕೃತ ಕಾಲೇಜುಗಳಲ್ಲಿ ಕನ್ನಡದ ಅನಾದರ ಕುರಿತ ಲೇಖನಗಳು ಕೇವಲ ಕನ್ನಡ ಪ್ರೇಮಕ್ಕೆ ಮಾತ್ರ ಸೀಮಿತವಾಗದೆ ’ಅಸಹನೆ’ಯನ್ನೂ ವ್ಯಕ್ತಪಡಿಸುತ್ತವೆ. ವಚನ ಚಳುವಳಿಯ ನೇತಾರ ಬಸವಣ್ಣ, ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ, ಗಡಿಯಲ್ಲಿ ಕನ್ನಡದ ಕೆಲಸ ಮಾಡಿದ ಚೆನ್ನಬಸವ ಪಟ್ಟದ್ದೇವರ ಕುರಿತ ಲೇಖನಗಳು ಚೆನ್ನಾಗಿವೆ. ಕನ್ನಡ ಪ್ರೀತಿಯು ಅಭಿಮಾನದ ನೆಲೆಯಲ್ಲಿಯೇ ನಿಂತು ಗಿರಕಿ ಹೊಡೆಯುತ್ತದೆ. ಅದರಾಚೆಗೆ ಚಲಿಸುವ ಗುಣ, ನಿರ್ದಿಷ್ಟ ಅಂತರದಲ್ಲಿ ನಿಂತು ನೋಡುವ ಗುಣ ಗೈರುಹಾಜರಾಗಿದೆ.
ಡಾ. ಕೋ.ವೆಂ ರಾಮಕೃಷ್ಣೇಗೌಡ ಅವರು ಕನ್ನಡ ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ, ಗಾಯಕರಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ ನಿರಂತರ ಕ್ರಿಯಾಶೀಲತೆಯನ್ನು ಮೈಗೂಡಿಕೊಂಡಿದ್ದಾರೆ. ಇವರು ಭಾಷೆ, ಸಾಹಿತ್ಯ, ಸಂಸ್ಕೃತಿ ಮೊದಲಾದ ವಿಷಯಗಳನ್ನು ಕುರಿತು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ಧಾರೆ. ವ್ಯಕ್ತಿಚಿತ್ರ ಪ್ರಕಾರಗಳಲ್ಲಿ 16 ಕೃತಿಗಳನ್ನು ಪ್ರಕಟಿಸಿದ್ದಾರೆ. 40 ಕ್ಕೂ ಅಧಿಕ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. 2014ರಲ್ಲಿ ಕೆಂಪೇಗೌಡ ಪ್ರಶಸ್ತಿ ಪಡೆದ ಇವರು, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಉತ್ತಮ ಉಪನ್ಯಾಸಕರ ಪ್ರಶಸ್ತಿ, ಕನ್ನಡ ಭೂಷಣ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವರು ಸದ್ಯ ಬಿ.ಎಂ. ...
READ MORE