‘ನೂರೆಂಟು ಮಾತು’ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರ ಅಂಕಣ ಬರಹಗಳ ಸಂಕಲನ. ಇದು ಇಷ್ಟವಾಗಲು ಹಲವು ಕಾರಣಗಳಿವೆ. ಇಲ್ಲಿ ಅತಿಯಾದ ಉಪದೇಶವಿಲ್ಲ ನಕಾರಾತ್ಮಕ ಅಂಶಗಳಿಲ್ಲ, ಬೇರೆಯವರ ತೆಗಳಿಕೆಯಿಲ್ಲ, ವೈಯಕ್ತಿಕ ವಿಜೃಂಭಣೆಯೂ ಇಲ್ಲ ಎಲ್ಲವೂ ಜೀವನಕ್ಕೆ ಹತ್ತಿರವೆನಿಸುವ ಆಪ್ತ ಬರಹಗಳು. ಊರೂರು ಸುತ್ತೋದು, ಅವನ್ನೆಲ್ಲ ಓದುಗರಿಗೆ ತಿಳಿಸುವುದು ವಿಶೇಕರ ಭಟ್ರ ಮೆಚ್ಚಿನ ಕೆಲಸ, ಅವರು ಈ ಅಂಕಣ ಮಾಲಿಕೆಯಲ್ಲಿ ಬರೆಯದ ವಿಷಯಗಳಿಲ್ಲ, ತಾವು ಯಾರಿಂದಲೂ ಸೂರ್ತಿ ಪಡೆದು, ಅದರ ಫಲದಿಂದ ಮೂಡಿದ ವಿಚಾರಗಳನ್ನು ಓದುಗರಿಗೆ ತಲುಪಿಸುವ ತನಕ ಇವರಿಗೆ ನಿದ್ದೆಯಿಲ್ಲ. ವಿಶ್ವೇಶ್ವರ ಭಟ್ಟರ ಅಂಕಣ ಬರಹಗಳ ಸಂಕಲನವೇ ಈ ಕೃತಿ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE