ಕವಿ, ಕತೆಗಾರ, ಕಾದಂಬರಿಕಾರ, ಅಂಕಣಕಾರ, ಅಂತರ್ಜಾಲ ಪತ್ರಿಕೆಯಾದ ಕೆಂಡಸಂಪಿಗೆಯ ಸಂಪಾದಕರು ಹಾಗೂ ಆಕಾಶವಾಣಿ ಕಾರ್ಯಕ್ರಮದ ನಿರ್ವಾಹಕರಾದ ಅಬ್ದುಲ್ ರಶೀದ್ ಅವರ ಅಂಕಣ ಬರಹಗಳ ಸಂಗ್ರಹ ’ಕಾಲುಚಕ್ರ’.
ಕಾಲುಚಕ್ರದಲ್ಲಿನ ಲೇಖನಗಳು ವಾಸ್ತವದ ತುಣುಕುಗಳಾಗಿವೆ. ಈಗ ನಾನು ಪಂಜರಿಯರವ!, ವಿಮಾನ ರೆಕ್ಕೆಯ ಮೇಲೆ ಮರದ ಆನೆ, ನಿಜದ ನಾಯಿ ಮತ್ತು ಮಾಟದ ನಾಯಿ, ಆನೆಮರಿ ನುಗ್ಗಿದ ಮೈಸೂರಿನ ಕುರಿತು, ಹಿಮಪಾತ ಎಳೆಬಿಸಿಲು ಮತ್ತು ಮನುಷ್ಯರು, ರಮಣಿಯವರ ಗಿಳಿರಾಮನ ಕಥೆ, ಕತ್ರೀನಳ ಕಣ್ಣಲ್ಲಿ ಕಂಡ ಕಥೆಗಳು, ಶಾಸ್ತ್ರೀಯ ಕನ್ನಡ ಮತ್ತು ಹಳೆಯ ಡಾರ್ಲಿಂಗ್, ಬಿಸಿಲುಗಾಲದ ಮೂರು ಕತೆಗಳು, ಕಾಶ್ಮೀರದ ಒಂದು ಏಕಾಂತ, ಬುಟ್ಟಿಕೊರಚರ ಮದುವೆ ಆಲ್ಬಂ, ಹಕ್ಕಿ, ಇಡ್ಲಿ, ಹಾಗೂ ಪರಂಪರೆಯ ಪಾತ್ರೆ, ,ಮಲಯರ ಭಗವತಿಯ ಪಾತ್ರಿ ಹೇಳಿದ ಕಥೆ, ಕಣ್ಣಿಲ್ಲದ ಉದ್ಯಾನ ಸನ್ಮಾರ್ಗಿಯಲ್ಲದ ಗುಲಾಮ, ಸುಳ್ಳು ಆನೆಬಾಲವೂ ನಿಜದ ಹೆಂಡತಿಯೂ ಮುಂತಾದ ಲೇಖನಗಳಿವೆ.
'ಕೆಂಡಸಂಪಿಗೆ' ಎಂಬ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು. ಕೊಡಗು ಜಿಲ್ಲೆಯ ಸುಂಟಿಕೊಪ್ಪದ ರಶೀದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' ಎಂಬ ಕಥಾಸಂಕಲನ ಪ್ರಕಟಿಸಿರುವ ಅಬ್ದುಲ್ ರಶೀದ್ ಕವಿ, ಅಂಕಣಕಾರರು ಕೂಡ. ಅಬ್ದುಲ್ ರಶೀದ್ ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. ನನ್ನ ಪಾಡಿಗೆ ನಾನು’ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಇದುವರೆಗಿನ ಎಲ್ಲ ಕವಿತೆಗಳನ್ನು ಒಳಗೊಂಡ ಸಂಕಲನ. ’ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ...
READ MORE