ಪ್ರಜಾವಾಣಿ ದಿನಪತ್ರಿಕೆಯಲ್ಲಿ ಲೇಖಕ ನಾಗತಿಹಳ್ಳಿ ಚಂದ್ರಶೇಖರ ಅವರು ಅಂಕಣವಾಗಿ ಮೂಡಿಸಿದ ಲೇಖನಗಳ ಕೃತಿ -ರೆಕ್ಕೆ ಬೇರು. ನೀವು ಸದಾ ಪತ್ತೆಯಾಗುವ ಖಾಯಂ ವಿಳಾಸವೇನು?, ಓಹೋ ಹಿಮಾಲಯ, ಕಟ್ಟುವವರು, ಕೆಡುವವರು ಹೀಗೆ ವಾರಕ್ಕೊಂದು ಅಂಕಣ ಬರೆದವುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಅಂಕಣ ಬರೆಹಗಳು ಅವಸರದ ಸಾಹಿತ್ಯ ಎಂಬ ಮಾತಿಗೆ ಇವು ಅಪವಾದವಾಗಿವೆ. ಪ್ರತಿ ಬರೆಹದ ವಿಷಯ ವೈವಿಧ್ಯತೆಯೂ, ಸೊಗಸಾದ ಭಾಷೆ ಹಾಗೂ ಶೈಲಿಯೂ, ಗಮನ ಸೆಳೆಯುತ್ತದೆ.
ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ...
READ MORE