ಶ್ರೀದೇವಿ ಕೆರೆಮನೆ ಅವರ ಅಂಕಣ ಬರಹಗಳ ಸಂಗ್ರಹ. ಗ್ರಂಥದ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಅವರು ’... ಇಲ್ಲಿನ ಗ್ರಹಿಕೆ ಹಾಗೂ ವಿಶ್ಲೇಷಣಾ ಕ್ರಮಗಳು ವರ್ತಮಾನಕ್ಕೆ ಬದ್ಧವಾಗಿಯೂ ಪುರಾಣಚರಿತ್ರೆಗಳ ಪರಂಪರೆಯ ನಿರ್ದಿಷ್ಟ ಬಿಂದುಗಳೆಡೆಗೆ ತುಯ್ಯುತ್ತ ಸಾಗುತ್ತದೆ. ಆದ್ದರಿಂದ ಆಧುನಿಕೋತ್ತರ ಸಂದರ್ಭದ ಸಾಂಸ್ಕೃತಿಕ ತಲ್ಲಣಗಳನ್ನು ಶೋಧಿಸುವ ಚಿಂತನ ಕ್ರಮಗಳ ನವೀನ ವಿನ್ಯಾಸ ಈ ಬರಹಗಳಿಗೆ ಸಹಜವಾಗಿಯೇ ದಕ್ಕಿದೆ... ಅಂಕಣ ಬರಹಗಳಲ್ಲಿ ಸಾತತ್ಯವನ್ನು ಉಳಿಸಿಕೊಂಡು ಜನ-ಮನವನ್ನು ಗೆಲ್ಲಬಲ್ಲ ಪರಿಣಾಮಕಾರಕತೆಯನ್ನು ಸಾಧಿಸುವುದು ಸಾಹಸವೇ ಸರಿ. ಈ ಸಾಹಸದಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಈ ಗೆಲುವಿನ ದಾರಿಯಲ್ಲಿ ತಮ್ಮನ್ನು ನಿರಂತರ ತೊಡಗಿಸಿಕೊಂಡಿರುವ ವಿರಳರ ಸಾಲಿಗೆ ಶ್ರೀದೇವಿ ಕೆರೆಮನೆಯವರು ನಿಸ್ಸಂದೇಹವಾಗಿ ಸೇರುತ್ತಾರೆ,’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹಿರೇಗುತ್ತಿ ಮೂಲದ ಶ್ರೀದೇವಿ ಕೆರೆಮನೆ ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ. ಮೊದಲ ಕವನ ಸಂಕಲನ ’ನಾನು ಗೆಲ್ಲುತ್ತೇನೆ’. ಬಳಿಕ ’ಗೆಜ್ಜೆ ಕಟ್ಟದ ಕಾಲಲ್ಲಿ’,’ಮೌನದ ಮಹಾ ಕೋಟೆಯೊಳಗೆ’, ’ಮೈ ಮುಚ್ಚಲೊಂದು ತುಮಡು ಬಟ್ಟೆ’, ಕೃತಿಗಳು ಬಂದವು. ಅಂಗೈಯೊಳಗಿನ ಬೆಳಕು(ವಿಮರ್ಶಾ ಸಂಕಲನ), ’ಅಲೆಯೊಳಗಿನ ಮೌನ’, ’ನನ್ನ ದನಿಗೆ ನಿನ್ನ ದನಿಯು’ ಗಜಲ್ ಕೃತಿ. ’ಬೈಟೂ’ ಚಹಾ ಕುರಿತ ಸಂಕಲನವಾದರೆ ಬಿಕ್ಕೆಹಣ್ಣು, ಚಿತ್ತ ಚಿತ್ತಾರ ಅವರ ಕತೆಗಳ ಗುಚ್ಛ. ಗೂಡು ಕಟ್ಟುವ ಸಂಭ್ರಮದಲ್ಲಿ (ಪ್ರಬಂಧ ಬರಹ ಸಂಕಲನ). ’ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ ...
READ MORE