ಮಹಿಳೆ ಮತ್ತು ಅಭಿವೃದ್ಧಿ

Author : ಶಾರದಾ ಗೋಪಾಲ

Pages 168

₹ 140.00




Year of Publication: 2019
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಶಾರದಾ ಗೋಪಾಲ ಅವರ ಅಂಕಣ ಬರಹಗಳು ಈ ಕೃತಿಯಲ್ಲಿವೆ. ಜಾಗತೀಕರಣದಿಂದ ಮಹಿಳೆ ಅನೇಕ ಪ್ರಯೋಜನ ಪಡೆದಿದ್ದರೂ, ಶೋಷಣೆಗಳಿಂದ ಸಂಪೂರ್ಣ ಮುಕ್ತವಾಗಿಲ್ಲ. ವರ್ಷದಿಂದ ವರ್ಷಕ್ಕೆ ಮಹಿಳೆಯರ, ಬಾಲಕಿಯರ ಮೇಲಾಗುತ್ತಿರುವ ದೌರ್ಜನ್ಯದ ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ. ಅಂತಹ ಪ್ರಕರಣಗಳ ಕುರಿತು ಮತ್ತು ಈ ಸಂದರ್ಭದಲ್ಲಿ ಸರ್ಕಾರದ ಹೊಣೆಗಾರಿಕೆ ಮತ್ತು ಸಂವಿಧಾನಾತ್ಮಕವಾಗಿ ಶೋಷಣೆಯ ವಿರುದ್ಧ ಹೋರಾಡುವ, ಅಭಿವ್ಯಕ್ತಿಯನ್ನು ಪಡೆಯುವುದರ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.

About the Author

ಶಾರದಾ ಗೋಪಾಲ

ಲೇಖಕಿ, ಅಂಕಣಗಾರ್ತಿ ಶಾರದಾ ಗೋಪಾಲ್ ಅವರು ಬಿ.ಎಸ್ಸಿ., ಡಿಪ್ಲೊಮಾ (ಪತ್ರಿಕೋದ್ಯಮ) ಪದವೀಧರೆ.  ಜನನ 28 ಜೂನ್ 1960, ಬಕ್ಕೆಮನೆಯಲ್ಲಿ. ತಂದೆ - ನಾರಾಯಣ ಹೆಗ್ಗಡೆ, ತಾಯಿ- ಪಾರ್ವತಿ.  ಅವರ ಅಭ್ಯುದಯದ ಹಾದಿಯಲ್ಲಿ (ಕಥಾಸಂಕಲನ), ಸಾಮಾಜಿಕ ಅರಣ್ಯ , ಔಷಧಿ ಮತ್ತು ನಾವು, ನಿಷೇಧಿತ ಔಷಧಗಳು (ವೈದ್ಯಕೀಯ ಬರಹಗಳು-1991) ಕೃತಿಗಳು ಪ್ರಕಟವಾಗಿವೆ. `ಔಷಧಿ ಮತ್ತು ನಾವು' ಕೃತಿಗೆ ರಾಷ್ಟೋತ್ಥಾನ ಪರಿಷತ್ತಿನ ಎಂ.ಎಸ್.ಎನ್. ಅಯ್ಯಂಗಾರ್ ಪ್ರಶಸ್ತಿ ಲಭಿಸಿದೆ. ...

READ MORE

Related Books