ಲೇಖಕಿ, ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಅವರು 'ಸಂವಾದ' ಮಾಸ ಪತ್ರಿಕೆಯಲ್ಲಿ ಸುಮಾರು ಒಂದು ವರ್ಷಗಳ ಕಾಲ ಬರೆದ ಅಂಕಣಗಳು ಮತ್ತು ವಾರ್ತಾಭಾರತಿ ಪತ್ರಿಕೆಯಲ್ಲಿ ಬರೆದ ಅಂಕಣಗಳ ಸಂಗ್ರಹವೇ ‘ಹೊಸ ಪಕ್ಷಿ ರಾಗ'. ಧರ್ಮ, ಅರ್ಥ, ಕಾಮ, ರಾಜಕಾರಣ, ಶಿಕ್ಷಣ, ಸಮಾಜ, ಸಿನೆಮಾ ಮೊದಲಾದ ವೈವಿಧ್ಯ ವಿಷಯಗಳನ್ನು ಸಣ್ಣ ಚೌಕಟ್ಟಿನೊಳಗೆ ಹಂಚಿಕೊಳ್ಳುವ ಪ್ರಯತ್ನವನ್ನು ಲೇಖಕಿ ಇಲ್ಲಿ ಮಾಡಿದ್ದಾರೆ. ರಾಜಕೀಯದ ಕುರಿತಂತೆಯೂ ಯಾವ ಮಡಿಯನ್ನಿಟ್ಟುಕೊಳ್ಳದೆ ಲೇಖಕಿ ಇಲ್ಲಿ ಚರ್ಚಿಸುತ್ತಾರೆ. ಇಲ್ಲಿನ ಲೇಖನಗಳು ವರ್ತಮಾನದ ರಾಜಕೀಯದ ಜೊತೆಗೆ, ಹೇಗೆ ಹೆಣ್ಣು ರಾಜಕೀಯದಲ್ಲಿ ಸುಲಭದ ಬಲಿಪಶುವಾಗುತ್ತಾಳೆ ಎನ್ನುವುದನ್ನು ಹೇಳುತ್ತದೆ. ಅಕಾಲದಲ್ಲಿ ಬಲಿಯಾದ ತನ್ನ ಮಗು ಪೂರ್ಣನ ಕುರಿತಂತೆಯೂ ಹೃದಯಸ್ಪರ್ಶಿ ಬರಹವೊಂದು ಇಲ್ಲಿದೆ. ತನ್ನ ಮಗುವಿನ ಮೂಲಕ, ಜಗತ್ತನ್ನು ಮುಟ್ಟುವ ಪ್ರಯತ್ನವನ್ನು ಲೇಖಕಿ ಮಾಡುತ್ತಾರೆ. ನಾವು ಕಾಣದ್ದನ್ನು ಮಗು ಹೇಗೆ ಕಾಣ ಬಲ್ಲುದು ಎನ್ನುವುದನ್ನು ಈ ಲೇಖನ ಹೇಳುತ್ತದೆ.
ಸೂಕ್ಷ್ಮ ಸಂವೇದನೆಯಿಂದ ಬರೆಯುವ ಜ್ಯೋತಿ ಗುರುಪ್ರಸಾದ್ (1965) ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಆರ್.ಜ್ಯೋತಿ ಎಂಬ ಹೆಸರಿನ ಇವರ ಕಾವ್ಯನಾಮ ಜ್ಯೋತಿ ಗುರುಪ್ರಸಾದ. ಟಿ. ನರಸೀಪುರ ಮೂಲದವರಾದ ಅವರು ಟಿ. ನರಸೀಪುರ, ಮಂಡ್ಯ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಗೃಹಸ್ಥ ಜೀವನಕ್ಕೆ ಕಾಲಿಟ್ಟು ಕಾರ್ಕಳಕ್ಕೆ ಬಂದರು. ಕಾರ್ಕಳದ ಭುವನೇಂದ್ರ ಕಾಲೇಜು, ಕ್ರೈಸ್ಟ್‌ಕಿಂಗ್ ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಕಾರ್ಕಳದ ಎಸ್.ವಿ.ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜ್ಯೋತಿ ಅವರ ಮೊದಲ ಕವನ ಸಂಕಲನ’ಚುಕ್ಕಿ’ ...
READ MORE