ಹೊಳೆದಂಡೆ ಮೇಲೆ ಕುಳಿತು ತುಂಬಿ ಹರಿಯುವ ಹೊಳೆಯನ್ನು ನೋಡುವ ನೋಟದಲ್ಲಿ ನಿರ್ಲಿ[ಪ್ತತೆ ಹಾಗೂ ಆಪ್ತತೆ ಎರಡೂ ಇರುತ್ತವೆ. ಅದಕ್ಕಾಗಿ ಈ ರೀತಿಯ ತಮ್ಮ ಅಂಕಣ ಬರೆಹಗಳಿಗೆ ’ಹೊಳೆದಂಡೆ ಅಂಕಣಮಾಲೆ ಎಂದು ಹೆಸರಿಸಿದ್ದಾಗಿ ಲೇಖಕ ನಾಗತಿಹಳ್ಳಿ ಚಂದ್ರಶೇಖರ ಹೇಳುತ್ತಾರೆ. ಖಾಸಗಿ ಹಾಗೂ ಸಾರ್ವತ್ರಿಕ ಚಿಂತನೆಗಳು ಈ ಕೃತಿಯಲ್ಲಿವೆ. ಹಳೆಯ ವಿಚಾರ-ವಿಶ್ಲೇಷಣೆಗಳು ಆವಿಯಾಗಬಾರದು ಎಂಬ ಕಾರಣಕ್ಕೆ ಅಂಕಣ ಬರೆಹಗಳನ್ನು ತಾವು ಹೊಳೆದಂಡೆ ಅಂಕಣ ಮಾಲೆಯಡಿ ಕೊಡುತ್ತಿರುವುದಾಗಿ ಹೇಳುತ್ತಾರೆ. ಅಂಕಣಗಳು ವಿಷಯ ವೈವಿಧ್ಯತೆಯಿಂದ ಕೂಡಿದ್ದು, ಸರಳವಾಗಿ ಅಷ್ಟೇ ಆಸಕ್ತಿಯುತವಾಗಿ ಓದಿಸಿಕೊಂಡು ಹೋಗುತ್ತವೆ.
ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ...
READ MORE