‘ಕೊಡಗಿನ ಸಾಹಿತ್ಯ ತಪಸ್ವಿಗಳು’ ಕೃತಿಯು ವೈಲೇಶ್ ಪಿ. ಎಸ್ ಕೊಡಗು ಅವರ ಅಂಕಣ- ರಿಂಗಣ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸುಬ್ರಾ `ಭಾರತೀಯರಿಗೆ ಚಾರಿತ್ರಿಕ ಪ್ರಜ್ಞೆ ಕಡಿಮೆ ಎಂಬ ಮಾತನ್ನು ಅಸರಬ್ ಗಣಿತಜ್ಞ ಅಲ್ಬೆರೂನಿ ಹೇಳಿದ್ದಾನೆ. ನಾವು ನಮ್ಮ ದೇಶದ ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಊರಿನ ಚರಿತ್ರೆಯ ಬಗ್ಗೆ ಅಧ್ಯಯನ ಮಾಡಲು ಹೊರಟರೂ ಈ ಮಾತಿನ ಮರ್ಮ ನಮಗೆ ನಿಚ್ಛಳವಾಗಿ ಅರಿವಾಗುತ್ತದೆ. ನಾವು ಭಾರತೀಯರು ಯಾವುದನ್ನೂ ದಾಖಲಿಸಿಡುವ ಗೋಜಿಗೆ ಹೋಗುವುದಿಲ್ಲ. ಈ ನಿಟ್ಟಿನಲ್ಲಿ, ಕೊಡಗಿನ ಲೇಖಕರು ಮತ್ತು ಅವರ ಕೃತಿಗಳ ಕುರಿತು ವೈಲೇಶ್ ಅವರ ಈ ಅಂಕಣದ ಸಂಕಲನ ಒಂದು ಸಾರ್ಥಕ ಕೆಲಸ. ಮುಂದೆ ಸಾಹಿತ್ಯಿಕ ಅಧ್ಯಯನಕಾರರಿಗೆ ಈ ಕೃತಿ ಮಹತ್ವದ ಒಂದು ಆಕರವಾಗಲಿದೆ ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.