‘ನಾನು ಕಂಡಂತೆ ನನಗೆ ಕಂಡಷ್ಟು’ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅವರ ಅಂಕಣ ಬರಹಗಳ ಸಂಕಲನ. ಇಲ್ಲಿ ವಿಜಯ ಕರ್ನಾಟಕ ದೈನಿಕದಲ್ಲಿ ಪ್ರಕಟವಾದ ಚಂಪಾ ಅವರ ಅಂಕಣಗಳು ಸಂಕಲನಗೊಂಡಿವೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಈ ಅಂಕಣದಲ್ಲಿ ಸಮಕಾಲೀನ ವ್ಯಕ್ತಿಗಳ, ವಿದ್ಯಮಾನಗಳ ವಿಶ್ಲೇಷಣೆಗಳ ಭಿನ್ನ ಬರಹಗಳು ಸಂಕಲನಗೊಂಡಿವೆ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE