‘ಭ್ರಷ್ಟಾಚಾರದ ಮೊದಲ ಹೆಜ್ಜೆ’ ಕೃತಿಯು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅಂಕಣ ಬರಹಗಳ ಸಂಕಲನವಾಗಿದೆ. ಇಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಮುಂಜಾವಿಗೊಂದು ನುಡಿಕಿರಣ, ನಾಟಕದ ಸುತ್ತಮುತ್ತ, ಭ್ರಷ್ಟಾಚಾರದ ಮೊದಲ ಹೆಜ್ಜೆ, ಹೊರನಾಡ ಕನ್ನಡಿಗರ ಮಹಾಮೇಳ, ಕದಳೀವನದಿಂದ ಕಾಶ್ಮೀರದ ಕಣಿವೆಗೆ, ತುಂಬಿ ಹರಿದ ‘ತುಂಗಭದ್ರೆ’ಯರು, ಮಾರಿಹಬ್ಬ ಆಗುತ್ತಿರುವ ಚುನಾವಣೆಗಳು, ಗುಡಿಯೊಳಗೆ ಗುರಿಯೊಡೆಯನಿದ್ದಾನೋ ಇಲ್ಲವೋ! ಮತದಾನ ಭಿಕ್ಷುಕರಿಗೆ ನೀಡುವ ಕಿಲುಬು ಕಾಸಲ್ಲ!, ಫ್ರಾನ್ಸ್ ದೇಶದಿಂದ ಒಂದು ಪತ್ರ, ಹೊಸ ಸರಕಾರ ಬಂಗಾರ ಬಿತ್ತಿ ಬೆಳೆಯಬಲ್ಲುದೇ? ದೇವರು ಕರುಣಾಮೂರ್ತಿಯೇ, ಕ್ರೂರಿಯೇ?, ಗಿಳಿಯು ಪಂಜರದೊಳಿಲ್ಲ..!, ಅದು ನಿನ್ನ ಮನೆ, ಇದು ಸುಮ್ಮನೆ! ಹೀಗೆ ಹಲವಾರು ಲೇಖನಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ.
ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರ್ನಾಟಕದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಕಾರಿಗಳು. ಒಂದು ಧಾರ್ಮಿಕ ಪೀಠದ ಸಮಸ್ತ ಕಾರ್ಯಚಟುವಟಿಕೆಗಳ ಸುಸೂತ್ರ ನಿರ್ವಹಣೆಗೆ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಭಾರತ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಳವಸಿಕೊಂಡು, ಇಂದಿಗೂ ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತೀಯ ಪರಂಪರೆಯಿಂದ ಬಂದ ಸಾಂಪ್ರದಾಯಿಕ ಜ್ಞಾನ ಮತ್ತು ಪಾಶ್ಚಿಮಾತ್ಯ ಆಧುನಿಕ ತಂತ್ರಜ್ಞಾನ ಎರಡನ್ನೂ ವಿಶಿಷ್ಟ ರೀತಿಯಲ್ಲಿ ಬೆರೆಸಿ ಹದಗೊಳಿಸಿಕೊಂಡು ಬಳಸುತ್ತಿರುವ ಇವರ ಸಾಧನೆಗಳು ಹಲವಾರು. ಸಂಸ್ಕೃತ ವ್ಯಾಕರಣ ಕುರಿತು ಆಧುನಿಕ ರೀತಿಯಲ್ಲಿ ಅಧ್ಯಯನ ನಡೆಸಲು ಅನುವುಮಾಡಿಕೊಡುವ ಇವರ ‘ಗಣಕಾಷ್ಟಾಧ್ಯಾಯಿ’ ತಂತ್ರಾಂಶ ಮತ್ತು ...
READ MORE