ಖ್ಯಾತ ಪತ್ರಕರ್ತ -ಪ್ರಕಾಶಕ ಪಿ. ಲಂಕೇಶ ಅವರು ರಚಿಸಿದ ಅಂಕಣ ಬರಹಗಳ ಕೃತಿ-ಟೀಕೆ-ಟಿಪ್ಪಣಿ ಸಂಪುಟ-3. ಈ ಬರಹಗಳನ್ನು ಸಂಪಾದಿಸಿದವರು-ಪಾರ್ವತೀಶ್. ತಮ್ಮದೇ ಲಂಕೇಶ್ ಪತ್ರಿಕೆಯಲ್ಲಿ ಪ್ರತಿ ವಾರವೂ ಅರ್ಥಪೂರ್ಣವಾಗಿ, ತುಂಬಾ ಪರಿಣಾಮಕಾರಿಯಾಗಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುತ್ತಿದ್ದ ಲಂಕೇಶ್ ಅವರು ತಮ್ಮ ಪ್ರಖರ ವೈಚಾರಿಕತೆಯೊಂದಿಗೆ ಓದುಗರ ವರ್ಗವನ್ನು ಸೃಷ್ಟಿಸಿದ್ದರು. ಈಗಾಗಲೇ, ಅಂಕಣ ಬರಹಗಳನ್ನು ಎರಡು ಸಂಪುಟಗಳಲ್ಲಿ ಪ್ರಕಾಶಿಸಿದ್ದು, ಸಂಪುಟ-3ರ ಈ ಕೃತಿಯಲ್ಲಿ ಬರಹಗಳ ವಸ್ತುಗಳು ಪುನರಾವರ್ತನೆಯಾದರೂ ಅವುಗಳ ಶೈಲಿಯಿಂದ ಭಿನ್ನವೆನಿಸುತ್ತವೆ ಮತ್ತು ಕಾಲಘಟ್ಟದ ಅಂತರದೊಂದಿಗೆ ತಾಜಾತನವನ್ನು ಪಡೆದಿವೆ.
ಪಾರ್ವತೀಶ ಹಾಗೂ ಬಿಳಿದಾಳೆ ಈಶ ಎಂಬ ಹೆಸರಿನಲ್ಲಿ ಬರೆಯುವ ಪತ್ರಕರ್ತ- ಲೇಖಕ ಪಾರ್ವತೀಶ್ ಜನಿಸಿದ್ದು 1967ರಲ್ಲಿ. ಬಾಲ್ಯ- ಪ್ರಾಥಮಿಕ ಶಿಕ್ಷಣ ಪಡೆದದ್ದು ಆನೇಕಲ್, ಮಾಲೂರು, ದೊಡ್ಡ ಬಳ್ಳಾಪುರದಲ್ಲಿ. ಬಿ.ಕಾಂ. ಪದವಿ ಪೂರ್ಣಗೊಳಿಸಿರುವ ಅವರು ಎಂ.ಎ. ಪತ್ರಿಕೋದ್ಯಮ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿದವರು. ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮದವರಾದ ಅವರು ಅರೆಕಾಲಿಕ ರೈತರೂ ಹೌದು. ಕೆಲಕಾಲ ಸರ್ಕಾರಿ ನೌಕರಿ ಮಾಡಿದ ಪಾರ್ವತೀಶ್ ಅವರು ನಂತರ ಕರ್ನಾಟಕ ಪ್ರಗತಿರಂಗ ಹಾಗೂ ಕರ್ನಾಟಕ ವಿಮೋಚನಾ ರಂಗದ ಸಕ್ರಿಯ ಕಾರ್ಯಕರ್ತರಾಗಿದ್ದರು. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸಾಕೇತ್ ...
READ MORE