ಸಾಹಿತ್ಯ ಸಲ್ಲಾಪ’ ಕನ್ನಡಪ್ರಭ ಪತ್ರಿಕೆಗಾಗಿ ಹಿರಿಯ ಲೇಖಕ ಹಾ.ಮಾ. ನಾಯಕ ಅವರು ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ. ಇದು ಸಾಹಿತ್ಯಕ ಪ್ರಸ್ತಾಪವನ್ನು ಕುರಿತು ಬರೆಯುತ್ತಿದ್ದ ವಿಶೇಷ ಅಂಕಣ. ಹತ್ತಿರ ಹತ್ತಿರ ಎರಡು ವರ್ಷಗಳ ಅವಧಿಯ ಸಾಹಿತ್ಯ ಸಲ್ಲಾಪ ಲೇಖನಗಳು ಈ ಕೃತಿಯಲ್ಲಿ ಸಂಗ್ರಹಗೊಂಡಿವೆ. ಇಲ್ಲಿ ಸರ್ಕಾರದ ಸನ್ಮಾನ, ಪಾಠಕರೆ ಪಾಠ, ಜಾನಪದ ಅಧ್ಯಯನ, ಪುನರುತ್ಥಾನ, ರಂಗಯ್ಯ-ಎಪ್ಪತ್ತು, ಶ್ರೀಮಲೆಯ ಸಾಹಿತ್ಯಭಕ್ತ, ಕಾದಂಬರಿ - ಬೆಳ್ಳಿತೆರೆ, ಸಂಸ್ಕೃತಿ ಸಂಪನ್ನ, ಜೀವನಧರ್ಮಯೋಗ, ಒಂದು ನೆನಪು, ಹವ್ಯಾಸಿಗಳ ಕಲೆ, ಸಾಹಿತ್ಯ ಲಾಲನೆ, ವಿಶ್ವ ತಮಿಳು ಸಮ್ಮೇಳನ, ಕಡಲು-ಬೆಳದಿಂಗಳು, ಕನ್ನಡದ ಸೇನಾನಿ, ಬುದ್ಧಿ ಜೀವಿಗಳ ಜವಾಬ್ದಾರಿ, ರಾಜ್ಯಾಂಗ- ರಾಜಸ್ಥಾನಿ, ನಾವೂ ನೆಹರೂಗಳು, ರಾಮಾಯಣದ ಭಾರ, ಬಸವ ಪ್ರಭೆ, ಪುಣ್ಯಸ್ಮರಣೆ, ಕ್ರಾಂತಿಯ ಕಹಳೆ, ಸಾಹಿತ್ಯ ಸಲ್ಲಾಪ, ಐವತ್ತರ ಅಡಿಗರು, ಕನಸುಗಾರರ ಕೆಲಸ, ವಿವಾದದ ಕೊನೆ, ಜಿ. ಹನುಮಂತರಾವ್, ನಮ್ಮ ಸಂಸ್ಕೃತಿಯ ಸಮೀಕ್ಷೆ, ಅಚ್ಚಗನ್ನಡಿಗ-ಅನಕೃ, ಶಾಸಕ ಸಾಹಿತಿ, ಕನ್ನಡದ ಪುಣ್ಯ, ಬಂಗಾರದ ಬೆಳೆ, ಅಪಾಯದ ಘಂಟೆ, ಅಂತರ್ ಭಾರತಿ, ಆಮುಖ-ಈಮುಖ, ಭಾಷೆಯ ಬಣ್ಣ ಸೇರಿದಂತೆ ನೂರು ಲೇಖನಗಳು ಸಂಕಲನಗೊಂಡಿವೆ.
ತಮ್ಮ ಅಂಕಣ ಬರಹಗಳಿಂದ ಪ್ರಸಿದ್ಧರಾಗಿದ್ದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಸಾಹಿತ್ಯ- ಸಾಂಸ್ಕೃತಿಕ ಲೋಕದ ದೊಡ್ಡ ಹೆಸರಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ 1931ರ ಸೆಪ್ಟೆಂಬರ್ 12ರಂದು ಜನಿಸಿದರು. ತಂದೆ ಶ್ರೀನಿವಾಸನಾಯಕ, ತಾಯಿ ರುಕ್ಮಿಣಿಯಮ್ಮ. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ ಭಾಷಾವಿಜ್ಞಾನದಲ್ಲಿ ಎಂ.ಎ. (1958)ಪದವಿಯನ್ನು ಪಡೆದರು. ತುಮಕೂರಿನಲ್ಲಿ ಕನ್ನಡ ಅಧ್ಯಾಪಕ (1955) ಆಗುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದ ಅವರು ಅನಂತರ ಪ್ರವಾಚಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುಲಪತಿ (1984) ...
READ MORE