‘ಹಾವೇರಿಯಾಂವ್’ ಈ ಕೃತಿಯು ಲೇಖಕ ಮಾಲತೇಶ ಅಂಗೂರು ಅವರು ಪತ್ರಿಕಾ ಅಂಕಣ ಬರಹಗಳ ಸಂಗ್ರಹ. ಉತ್ತರ ಕರ್ನಾಟಕ ಜವಾರಿ ಭಾಷೆಯನ್ನೊಳಗೊಂಡ ಬರಹಗಳಿವು. ಡೆಕ್ಕನ್ ನ್ಯೂಸ್ ಪತ್ರಿಕೆಯ ‘ಕಾಕಾ ಕಾಲಂ’ ಅಂಕಣದಲ್ಲಿ ಪ್ರಕಟವಾದ 44 ಲೇಖನಗಳಿವೆ. ಇಲ್ಲಿಯ ಬರಹಗಳಿಗೆ ನಾಮದೇವ ಕಾಗದಗಾರ 44 ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಸಾಮಾಜಿಕ ವಿಡಂಬನೆ, ರಾಜಕೀಯ ವಿದ್ಯಮಾನಗಳ ವಿಮರ್ಶೆ ಇಲ್ಲಿಯ ಬರಹಗಳ ವೈಶಿಷ್ಟ್ಯ.
ಲೇಖಕ ಮಾಲತೇಶ ಅಂಗೂರ ಮೂಲತಃ (ಜನನ: 03-07-1969) ಹಾವೇರಿಯವರು. ಕೌರವ ದಿನಪತ್ರಿಕೆಯ ಮುಖ್ಯ ವರದಿಗಾರರು. ಅಂಕಣ ಬರಹ, ಕವಿತೆ, ಕಥೆಗಳ ರಚನೆ. ಯೋಗಾಸನ, ಕ್ರಿಕೆಟ್, ಟೆನಿಸ್‌ನಲ್ಲಿ ಆಸಕ್ತರು. ವನ್ಯಜೀವಿಗಳ ಛಾಯಾಚಿತ್ರಗಳಿಗೆ ರಾಜ್ಯ-ಅಂತರ್ ರಾಷ್ಟ್ರೀಯ ಮನ್ನಣೆ ದೊರೆತಿದೆ. ‘ಹಾವೇರಿಯಾಂವ್ ಎಂಬುದು ಅವರ ಪತ್ರಿಕಾ ಅಂಕಣ ಬರಹಗಳ ಸಂಗ್ರಹ ಕೃತಿ. ‘ಬಣ್ಣದ ಗರಿ’ ಅಂಕಣ ಬರಹಗಳ ಕೃತಿ. 2016-17ನೇ ಸಾಲಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಅತ್ಯುತ್ತಮ ಅಂಕಣ ಬರಹ ಮಾಧ್ಯಮ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ಹಾಗೂ ಸಂಪಾದಕರ ಸಂಘದ ಅತ್ಯುತ್ತಮ ಅಂಕಣ ಬರಹ ರಾಜ್ಯ ಪ್ರಶಸ್ತಿ ...
READ MORE