‘ಕಣ್ಣ ಮಿಂಚು’ ಕಿಶೋರ ಸಾಹಿತಿ ಅಂತಃಕರಣನ ಅಂಕಣ ಬರಹಗಳ ಸಂಕಲನ.. ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಬೆನ್ನುಡಿ ಬರೆದು, ಕಥೆ ಕವನಗಳನ್ನು ಮುಚ್ಚಿದ ಬಾಗಿಲುಗಳ ಒಳಗೆ ಕುಳಿತು ಕಲ್ಪನಾವಿಲಾಸದಲ್ಲಿ ವಿಹರಿಸಿ ಬರೆದು ಬಿಡಬಹುದು. ಆದರೆ ಅಂಕಣಗಳನ್ನು ಬರೆಯಬೇಕಾದರೆ ನಾವು ನಮ್ಮ ಮುಚ್ಚಿದ ಬಾಗಿಲುಗಳನ್ನು ತೆರೆದು ಹೊರಗೆ ಹೋಗಬೇಕು. ಒಬ್ಬ ಅಂಕಣಕಾರನಿಗೆ ಇರಬೇಕಾದ ಈ ಗುಣಗಳೆಲ್ಲವೂ ಅವನ ವಯಸ್ಸಿನ ಪ್ರಮಾಣದಲ್ಲಿ ಅಂತಃಕರಣನಲ್ಲಿವೆ ಎನ್ನುತ್ತಾರೆ. ಕಿಶೋರ ಸಾಹಿತಿ ಅಂತಃಕರಣ ತಮ್ಮ ಗ್ರಹಿಕೆಗೆ ಸಿಕ್ಕ ವಿಷಗಳ ಕುರಿತು ಸರಳ ಭಾಷೆಯಲ್ಲಿ ಅರ್ಥಪೂರ್ಣವಾಗಿ ಬರೆದಿದ್ದಾರೆ..
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE