ಸದಭಿರುಚಿಯಿಂದ ಕೂಡಿದ, ಮನಸ್ಸಿಗೆ ಮುದ ನೀಡುವ ಅತ್ಯುತ್ತಮ ಕನ್ನಡ ಚಿತ್ರಗಳನ್ನು ವೀಕ್ಷಿಸಿ ಅದರ ಒಳಾರ್ಥ ಹಾಗೂ ಒಳನೋಟಕ್ಕೆ ಕನ್ನಡಿ ಹಿಡಿದಿದ್ದಾರೆ ಲೇಖಕ ಕೇಶವಮೂರ್ತಿ. ದೇಶ ವಿದೇಶಗಳ ಕೆಲವೊಂದು ಉತ್ತಮ ಸಿನಿಮಾಗಳ ಬಗ್ಗೆ ಅವಲೋಕನ ಮಾಡಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ‘ಗಾಂಧಿ ಸೀಟು’ ಎಂಬ ಅಂಕಣಕ್ಕೆ ನಿರಂತರವಾಗಿ ಮನಮುಟ್ಟುವಂತೆ ಬರೆದ ಅಂಕಣ ಬರಹಗಳನ್ನು ಸಂಗ್ರಹ ‘ಗಾಂಧಿ ಸೀಟು’.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಪುಲಿಪಾಪೇನಹಳ್ಳಿಯವರಾದ ಕೇಶವ ಮೂರ್ತಿ ಅವರು ಕೋಲಾರದಲ್ಲಿ ಹಾಗೂ ಶಿವಮೊಗ್ಗದಲ್ಲಿ ಶಿಕ್ಷಣ ಪಡೆದರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಇವರು ನಮ್ಮನಾಡು, ಕ್ರಾಂತಿದೀಪ, ಜನಹೋರಾಟ, ಈಟಿವಿ, ಉದಯವಾಣಿ ಪತ್ರಿಕೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕನ್ನಡ ಪ್ರಭಾ ದಿನಪತ್ರಿಕೆಯ ಸಿನಿಮಾ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಾಂಧಿ ಸೀಟು, ಕಲಾಭಿಮಾನಿ ಬಾಲಣ್ಣ ಹಾಗೂ ಗೇಟ್ ಕೀಪರ್ ಇವರು ಬರೆದ ಪ್ರಮುಖ ಕೃತಿಗಳು. ...
READ MORE