‘ಅರಬ್ಬರ ನಾಡಿನ ಭದ್ರತಾ ಲೋಕದಲ್ಲಿ-`ನಿಮ್ಮೆಲ್ಲರ ಮಾನಸ’ ಮಾಸಪತ್ರಿಕೆಯ ಅಂಕಣ ‘ಭದ್ರತಾ ಲೋಕದಲ್ಲಿ’ ಪ್ರಕಟವಾದ ಬರಹಗಳು. ಹೊಸನರಸೀಪುರ ಮಂಜುನಾಥ ಅವರು ಅಂಕಣಕಾರರು.’. ಈ ಕೃತಿಯು ಮುಖ್ಯವಾಗಿ ಅರಬ್ ದೇಶಗಳಲ್ಲಿ ಖಾಸಗಿ ಭದ್ರತಾ ಸಿಬ್ಬಂದಿಯ ಬದುಕಿನ ಕತೆಯನ್ನು ವಿವರಿಸುತ್ತದೆ. ಅರಬ್ ದೇಶಗಳಲ್ಲಿ ಖಾಸಗಿ ಭದ್ರತಾ ವ್ಯವಸ್ಥೆ ಹೇಗಿದೆ, ಅಲ್ಲಿ ಹೊರ ದೇಶದಿಂದ ಬಂದು ಕೆಲಸ ನಿರ್ವಹಿಸುವವರ ಬದುಕು ಹೇಗಿದೆ ಎಂಬುದರ ಕುರಿತು ಕೃತಿಯು ವಿವರಿಸುತ್ತದೆ.
ಅಂಕಣಕಾರ- ಲೇಖಕ ಹೊಳೆನರಸೀಪುರ ಮಂಜುನಾಥ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ (ಸೈಕಾಲಜಿ) ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ನಗರದ ನಿವಾಸಿ. ಅವರು ’ಭದ್ರತಾ ಲೋಕದಲ್ಲಿ’ ಎಂಬ ಕೃತಿ ಪ್ರಕಟಿಸಿದ್ದಾರೆ. ತಾವು ಕಂಡದ್ದನ್ನು, ಅನುಭವಿಸಿದ್ದನ್ನು ಹದವಾಗಿ ಸೆರೆಹಿಡಿದು ಬರೆವ ಮಂಜುನಾಥ್ ಅಂಕಣಕಾರರಾಗಿ ಜನಪ್ರಿಯರಗಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಗಳ ಬದುಕಿನ ಒಳಗನ್ನು ಬಿಂಬಿಸುವ ಅವರ ಮೆಚ್ಚುಗೆಗೆ ಪಾತ್ರವಾಗಿದೆ. ...
READ MORE