ಪುಸ್ತಕ ಪ್ರೀತಿ

Author : ಟಿ.ಪಿ. ಅಶೋಕ

Pages 494

₹ 140.00




Year of Publication: 1993
Published by: ಅಕ್ಷರ ಪ್ರಕಾಶನ
Address: ಸಾಗರ - 577417

Synopsys

ಲೇಖಕ, ಸಾಹಿತಿ ಟಿ. ಪಿ. ಅಶೋಕ ಅವರು ಮಯೂರ ಮಾಸ ಪತ್ರಿಕೆಯ `ಅವಲೋಕನ’ ಅಂಕಣದಲ್ಲಿ ಬರೆದ 87 ಲೇಖನಗಳ ಸಂಕಲನ `ಪುಸ್ತಕ ಪ್ರೀತಿ’. ಸಾಹಿತ್ಯದ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಇಲ್ಲಿ ಅವಲೋಕಿಸಿದ್ದಾರೆ. ಕು. ಶಿ. ಹರಿದಾಸ ಭಟ್ಟರು ತಮ್ಮ ಲೋಕಾಭಿರಾಮ ಅಂಕಣದ ‘ಪುಸ್ತಕ ಪ್ರೀತಿ’ ‘ಪುಸ್ತಕ ಪವಾಡ’ ಲೇಖನದಲ್ಲಿ ಗುರುತಿಸಿದಂತೆ “ಇದು ಪುಸ್ತಕಗಳ ಮೇಲೆ ಪ್ರೀತಿ ಉಳ್ಳವರೆಲ್ಲರೂ ಓದಿದರೆ ತಾವು ಓದದೇ ಬಿಟ್ಟಿರುವ ಪುಸ್ತಕಗಳ ಬಗ್ಗೆ ಕುತೂಹಲ ಮೂಡಿಸುವಂಥ ಒಂದು ವಿಮರ್ಶಾ ಗ್ರಂಥ” ಎಂದು ಪ್ರಶಂಸಿಸಿದ್ದಾರೆ. ವೈವಿಧ್ಯಮಯ ವಿಷಯ ವಸ್ತುಗಳನ್ನು ಒಳಗೊಂಡ ಅಂಕಣಗಳ ಬರೆಹಗಳ ಸಂಕಲನವಿದು. 

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books