ಚಂಪಾ ಎಂದೇ ಪರಿಚಿತರಾಗಿರುವ ಪ್ರೊ|| ಚಂದ್ರಶೇಖರ ಪಾಟೀಲರು ನಾಲ್ಕೂವರೆ ದಶಕಗಳ ಅವಧಿಯಲ್ಲಿ ಬರೆದಿರುವ ಲೇಖನಗಳ ಸಂಗ್ರಹವೇ ಚಂಪಾದಕೀಯ . ಸಾಹಿತ್ಯ, ರಾಜಕೀಯ, ಕನ್ನಡ ಚಳುವಳಿ, ಬಂಡಾಯ ಸಂಘಟನೆ, ವ್ಯಕ್ತಿ ಚಿತ್ರಗಳು - ಹೀಗೆ ಹಲವು ವಿಷಯಗಳನ್ನೊಳಗೊಂಡಿರುವ ಮೌಲಿಕ ಲೇಖನಗಳು ಇಲ್ಲಿವೆ. ಚಂಪಾ ಅವರದ್ದು ನಿಷ್ಠುರವಾದ, ಹರಿತವಾದ ವ್ಯಂಗ್ಯ ಶೈಲಿಯ ಜೊತೆಗೆ ಅರೋಗ್ಯಕರವಾದ ಟೀಕೆಗಳಿವೆ. ರಾಜಕಾರಣಿ ಆಗಿರಲಿ, ಸಾಹಿತಿಯಾಗಿರಲಿ, ಮಠಾಧಿಪತಿಯೇ ಆಗಿರಲಿ, ಎಲ್ಲರನ್ನೂ ಪ್ರೀತಿಯಿಂದಲೇ ಟೀಕಿಸುವ ಚಂಪಾ ಅವರ ಸ್ವಭಾವ ಈ ಕೃತಿಯಲ್ಲಿಯೂ ವ್ಯಕ್ತವಾಗಿದೆ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE