ಲೇಖಕ ಗೋಪಾಲಕೃಷ್ಣ ಮಧ್ಯಸ್ಥ ಅವರ ಅಂಕಣ ಬರಹಗಳ ಸಂಕಲನ;ʻ ಪದೋನ್ನತಿʼ. ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಅದರ ಪರಿಣಾಮ ಭಾಷೆಯ ಮೇಲೂ ಆಗಿದೆ. ಆಧುನಿಕತೆಯ ವಿವಿಧ ಆಯಾಮಗಳನ್ನು ಹೇಳಲು, ಅಭಿವ್ಯಕ್ತಪಡಿಸಲು ನಮಗೆ ಹೊಸ ಹೊಸ ಪದಗಳು ಬೇಕು. ಅದು ಸುಲಭಕ್ಕೆ ಅರ್ಥವಾಗುವಂತೆಯೂ ಇರಬೇಕು. ಹೀಗಾಗಿ, ಕಾಲಕಾಲಕ್ಕೆ ಹೊಸ ಪದಗಳನ್ನು ಟಂಕಿಸುತ್ತಲೇ ಇರಬೇಕಾಗುತ್ತದೆ. ಹಾಗೆ, ಟಂಕಿಸಿದ ಪದಗಳನ್ನು ಓದುಗರಿಗೆ ಪರಿಚಯಿಸಲಾಗಿದೆ.
ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡರಲ್ಲೂ ಸಮಾನ ಆಸಕ್ತಿ ಇರುವ ಗೋಪಾಲ ಕೃಷ್ಣ ಮಧ್ಯಸ್ಥ (ಜಿ.ಕೆ. ಮಧ್ಯಸ್ಥ) ಅವರು ಪ್ರಜಾವಾಣಿ, ವಿಜಯ ಕರ್ನಾಟಕ ಸೇರಿದಂತೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪತ್ರಿಕೆಗಳ ಭಾಷೆಯ ಬಳಕೆ ಮತ್ತು ಬದಲಾವಣೆಯನ್ನು ವಿಶ್ಲೇಷಣೆ ಮಾಡುತ್ತಾರೆ. ನಿವೃತ್ತಿಯ ನಂತರ ಉಡುಪಿಯಲ್ಲಿ ನೆಲೆಸಿರುವ ಅವರು ‘ದುಡ್ಡು ಕಾಸು', 'ಪದೋನ್ನತಿ' ಎಂಬ ಎರಡು ಅಂಕಣ ಬರಹಗಳನ್ನು ಪುಸ್ತಕಗಳಾಗಿ ಪ್ರಕಟಿಸಿದ್ದಾರೆ. ಗೋಪಾಲಕೃಷ್ಣ ಮಧ್ಯಸ್ಥ ಜನಿಸಿದ್ದು ಕಾಸರಗೋಡು ಸಮೀಪದ ಕುಂಜ್ಯಾರುವಿನಲ್ಲಿ. ...
READ MORE