ಇಳೆಯ ಕಣ್ಣು

Author : ಡಾ. ಧರಣೀದೇವಿ ಮಾಲಗತ್ತಿ

Pages 288

₹ 200.00




Year of Publication: 2010
Published by: ರೂಪ ಪ್ರಕಾಶನ
Address: ನಂ. 2406, 2407/ಕೆ-1, ಫಸ್ಟ್ ಕ್ರಾಸ್, ಹೊಸಬಂಡಿಕೇರಿ, ಮೈಸೂರು- 570004
Phone: 9342274331

Synopsys

‘ಇಳೆಯ ಕಣ್ಣು’ಲೇಖಕಿ ಡಾ. ಧರಣೀದೇವಿ ಮಾಲಗತ್ತಿ ಅವರ ಅಂಕಣ ಬರಹಗಳ ಸಂಕಲನ. ಇಲ್ಲಿ ನನಗೊಂದು ಹೆಸರಿಟ್ಟವರು, ನೈತಿಕತೆ v/s ಮೂಲಭೂತ ಹಕ್ಕುಗಳು, ಸತ್ಯಕ್ಕೆ ಸತ್ತವರನಾರನೂ ಕಾಣೆ, ಚೀಲದೊಳಗಿನ ಚೇಳುಗಳು, ಮಾನವ ಸಾಗಾಣಿಕೆ ಸುತ್ತಮುತ್ತ, ವ್ಯವಹಾರ ಸಂಸ್ಕೃತಿ, ಕಾಲಪಾನಿಯಲ್ಲ-ತೀರ್ಥಕ್ಷೇತ್ರ, ನಾವು ಹೆಚ್ಚೇ ಅದೀವಿ, ಉದ್ದಲಂಗದ ಹುಡುಗಿಯರು, ಲಘು-ಗುರುಗಳಾಚೆ, ಸತ್ತವರನ್ನು ಬದುಕಿಸುವತ್ತ, ಪ್ರತಿಮೆಗಳಿಗೆ ಬಾಯಿ ಬಂದರೆ ಏನೆಲ್ಲಾ ಹೇಳಿಯಾವು, ಆಚಾರವಿಲ್ಲದ ನಾಲಿಗೆ, ಮಾತು ಬಲ್ಲವರ ಜಗಳ ಚೆಂದ, ಬರಹಗಾರನ ಹಣೆಬರಹ, ಯಾಕಾರ ಬಂದ್ಯೆಪ್ಪ ಮಳೆರಾಜ, ಖಾಕಿಯನ್ನು ಟೀಕಿಸುವ ಮೊದಲೊಮ್ಮೆ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ, ಹರಕೊಳ್ಳೋ ನಿನ್ನ ಗುಳದಾಳಿ, ಹರಿದಾಸ ಕುಕ್ಕಜೆ ಐತ್ತಪ್ಪ ಯಾನೆ ರಾಮಯ್ಯ ನಾೈಕ, ಪತ್ರಿಕೋದ್ಯಮದ ಸಾಮ್ರಾಜ್ಞೆಯರು, ಅಳಿಯ, ಮಗಳ ಗಂಡ ಅಲ್ಲ, ಕ್ಯಾಟ್ ವಾಕ್- ಸಾಫ್ಟ್ ವೇರ್ - ಅಂಕುಡೊಂಕಿನ ಬಿಂಕ, ಕಾನೂನು ಬೇರೆ, ನ್ಯಾಯ ಬೇರೇನಾ, ಗಲ್ಫ್ ಗೆ ಹಾರುವ ರೆಕ್ಕೆ ಇಲ್ಲದ ಹಕ್ಕಿಗಳು, ಕೊಲ್ಲಿಯಲ್ಲಿ ಕಡಲ ತಡಿಯ ಬೆಳ್ಳಕ್ಕಿ ದಂಡು, ನಾನಲ್ಲದ ನನ್ನ ಹುಡುಕಾಟ, ಛದ್ಮವೇಷದ ಬಾರ್ ಅಂಗನೆಯರು, ಪುಟ್ಟ ಕೈಗಳಲ್ಲಿ ಪುಸ್ತಕವಿರಲಿ, ಪಾತ್ರೆಯಲ್ಲ, ಆಸ್ತಿ ಎನಿಸಿದ್ದ ಹಿರಿಯರು ಹೊರೆ ಯಾಕಾದರು, ಹೋರಾಟಕ್ಕಾಗಿ ಪಿಂಚಣಿಯೇ ಪಿಂಚಣಿಗಾಗಿ ಹೋರಾಟವೆ, ಸಂತನ ಹೆಸರಿನಲ್ಲಿ ಸಂತೆಯೇಕೆ, ಮೊಟ್ಟೆಗಳು ಮಾರಾಟಕ್ಕಿವೆ, ನಡುರಾತ್ರಿ ತೈಲ ಉರಿಸುವ ದಿನಗಳು, ಶೂಲಿಯ ಕನಸು- ಒಂದು ಹಿಡಿ ಬೆಂಕಿ ಕಿಡಿ, ಅಡ್ಡಗೋಡೆಯ ಮೇಲೆ ನಿರ್ವಹಣೆ, ಮತದಾನದ ಹಕ್ಕಿನಿಂದ ರಾಜಕೀಯ ಮೀಸಲಾತಿಯೆಡೆಗೆ, ಡಾ.ಬಿ.ಆರ್, ಅಂಬೇಡ್ಕರ್ ಮತ್ತು ಮಹಿಳಾ ವಿಮೋಚನೆ, ಸರ್ಕಾರೇತರ ಸಂಸ್ಥೆಗಳು ಮತ್ತು ಭ್ರಷ್ಟಾಚಾರ, ಜೆನಿಬ್, ಇಸ್ಮತ್, ಲಕ್ಷ್ಮಮ್ಮ ಮತ್ತು ಅಸಂಖ್ಯ ಅನಾಮಿಕರು, ಅವನೂ..ಅವಳೂ..ಹಾಗೇ ಸುಮ್ಮನೇ, ಕನಸುಗಳಿಗೆಲ್ಲಿಯ ಸೆನ್ಸಾರ್, ತಲೆಯ ಮೇಲೊಂದು ಕೊಡೆ ಇರಲಿ, ವಿಷಕನ್ಯೆಯರು ಮತ್ತು ಜೇನುಬೋನು, ವರ್ಷದ ದಿನಗಳೆಲ್ಲ ಅಮ್ಮಂದಿರ ದಿನಗಳೇ, ಕಪ್ಪು ಶನಿವಾರ ಮತ್ತು ಕಪ್ಪು ಪೆಟ್ಟಿಗೆಯ ಹುಡುಕಾಟ, ಕಾಲು ಮುರಿದ ಚಿಕ್ಕಗುಬ್ಬಿಗೆ ಸ್ಥಳವ ಕೊಡುವಿರಾ, ಬಂಡವಾಳ ಹೂಡಿಕೆ ಮತ್ತು ಮಣ್ಣಿನ ಮಕ್ಕಳ ವಾದ, ಕೊಂಬಿನ ಕುದುರೆಯೋ ಮರಗುದುರೆಯೋ ಹಾರುಗುದುರೆಯೋ, ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ, ಹುಡುಗಿಯರನ್ನೊಂದು ಮಾತು ಕೇಳಬಾರದೇ, ಮೂರ್ಖರಿಟ್ಟ ಹೆಜ್ಜೆಯಲ್ಲಿ ನಡೆಯುವ ಬುದ್ಧಿವಂತರು, ನೀರೆಗೊಪ್ಪುವ ಉಡುಗೆ ಸೀರೆ, ಮರೆಯಾಗುತ್ತಿರುವ ಅಂಚೆಯಣ್ಣ, ಹಾಗೂ ಉಗಿಬಂಡಿ ಎಂಬ ಥ್ರಿಲ್ ಎಂಬ 55 ಲೇಖನಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books