‘ಪದಸೋಪಾನ’ ಲೇಖಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಂಕಣಬರಹಗಳ ಸಂಕಲನ. ನಮ್ಮಲ್ಲಿ ಕಾಲ’ ಮತ್ತು ಕ್ರಿಯೆ’ ಎಂಬೆರಡು ಶಬ್ದಗಳು ವರ್ತಮಾನವನ್ನೂ ನಿರಂತರತೆಯನ್ನೂ ಸೂಚಿಸುವಂಥವು. ‘ಪದಸೋಪಾನ’ದ ಬರಹಳಿಗೆ ಈ ಹಿನ್ನೆಲೆ ಇದೆ. ಅವು ವರ್ತಮಾನ’ದ ತಲ್ಲಣಗಳಿಗೆ ಸ್ಪಂದಿಸುತ್ತಲೇ ನಿರಂತರತೆ’ಯನ್ನು ಧ್ಯಾನಿಸುತ್ತವೆ. ಭಾಷೆ, ಸಾಹಿತ್ಯ, ಪರಿಸರ, ಪ್ರವಾಸ, ತತ್ವಜ್ಞಾನ, ಚರಿತ್ರೆ, ಪುರಾಣ, ವಿಜ್ಞಾನ, ಅಹಾರ, ಧರ್ಮ, ಪ್ರಭುತ್ವ, ಹೀಗೆ ಈ ಬರಹಗಳ ವಿಸ್ತಾರ, ವೈವಿಧ್ಯ ಬೆರಗು ಮೂಡಿಸುವಂತಿದೆ. ನಿಂತ ನೆಲದಲ್ಲಿ ಗಟ್ಟಿಯಾಗಿ ಕಾಲೂರಿ ಜಗತ್ತನ್ನು ಒಳಗೊಳ್ಳುವ ಇಲ್ಲಿಯ ರಚನಾವಿನ್ಯಾಸ ಅಂಕಣ’ವನ್ನು ಮೀರಿ ಆಕಾರ’ ಪಡೆಯುವಂಥದು. ವ್ಯಕ್ತಿ’ಯನ್ನು ಮೀರಿವ್ಯಕ್ತಿತ್ವ’ವನ್ನು ಪ್ರಕಟಪಡಿಸುವಂಥದು. ಜಾನಪದ’ದಿಂದ ಜಾಗತಿಕ’ದವರೆಗಿನ ವಿಸ್ತಾರ ಅಧ್ಯಯನ, ಆಳವಾದ ಪರಿಶ್ರಮ; ನರಹಳ್ಳಿಯವರ ಬರವಣಿಗೆಯ ಲಯ’ವನ್ನು ರೂಪಿಸಿದ್ದರೂ, ಅದರ ಅಂತಃಸತ್ವ ಅಡಗಿರುವುದು ಕನ್ನಡ ಬಹುತ್ವ ಪರಂಪರೆ’ಯಲ್ಲಿಯೇ. ಎಲ್ಲವನ್ನೂ, ಎಲ್ಲರನ್ನೂ ಬಿಡಿ’ಯಾಗಿಯಲ್ಲದೆ ಇಡಿ’ಯಾಗಿ ನೋಡಬೇಕೆನ್ನುವ ಅವರ ‘ಸಮಗ್ರ ನೋಟ’ ನಿಲವುಗಳು ಸಹಜವಾಗಿ ಈ ಕೃತಿಯಲ್ಲಿ ಪ್ರಕಟಗೊಂಡಿವೆ.
©2024 Book Brahma Private Limited.