ಶ್ರೀವತ್ಸ ಜೋಶಿ ಅವರ ಅಂಕಣ ಬರೆಹಗಳ ಸಂಕಲನ-ತಳಿರು ತೋರಣ ಪರ್ಣಮಾಲೆ-ಭಾಗ-1. ಸಾಮಾಜಿಕ ವಿದ್ಯಮಾನಗಳು ಒಳಗೊಂಡು ವಸ್ತು ವೈವಿಧ್ಯತೆಯೊಂದಿಗೆ ಇಲ್ಲಿಯ ಬರೆಹಗಳು ಓದುಗರ ಗಮನ ಸೆಳೆಯುತ್ತವೆ. ಕ್ಷಿಷ್ಟ ಪರಿಕಲ್ಪನೆಗಳನ್ನೂ ಸಹ ಸರಳವಾಗಿ ವಿವರಿಸುವ ಲೇಖಕರ ಶೈಲಿಯು ಕೃತಿಯ ಮೌಲಿಕತೆಯನ್ನು ಹೆಚ್ಚಿಸಿದೆ.
ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದರು. ಕಲಿತದ್ದು ಎಂಜಿನಿಯರಿಂಗ್ ಆದರೂ ಕನ್ನಡದ ಬಗ್ಗೆ ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆ ಆಸಕ್ತಿಯೂ ಹೊಂದಿದ್ದಾರೆ. ಪ್ರಸ್ತುತ ಅಮೆರಿಕದ ವರ್ಜೀನಿಯಾದಲ್ಲಿ ವೃತ್ತಿಜೀವನ ನಡೆಸುತ್ತಿರುವ ಶ್ರೀವತ್ಸ ಜೋಶಿ ಕನ್ನಡದ ಪ್ರಸಿದ್ಧ ಪತ್ರಿಕೆಗಳ ಅಂಕಣ ಬರಹಗಾರರಾಗಿಯೂ ಕೂಡ ಹೆಸರು ಮಾಡಿದ್ದಾರೆ. ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ಅಭಿಮಾನ ಹೊಂದಿರುವ ಇವರು ದಟ್ಸ್ ಕನ್ನಡ.ಕಾಮ್ ಅಂತರ್ಜಾಲ ಕನ್ನಡ ಪತ್ರಿಕೆಯಲ್ಲಿ ಸತತ ಐದು ವರ್ಷಗಳ ವರೆಗೆ ವಿಚಿತ್ರಾನ್ನ ಹೆಸರಿನ ಸಾಪ್ತಾಹಿಕ ಅಂಕಣವನ್ನು ...
READ MORE