`ಬೆರಗಿನ ಬೆಳಕು, ಭಾಗ-1', ಗುರುರಾಜ ಕರಜಗಿ ಅವರು ಮಂಕುತಿಮ್ಮನ ಕಗ್ಗದ ಚೌಪದಿಗಳ ಕುರಿತು ಅರ್ಥವಿವರಣೆಯನ್ನು ಪ್ರಜಾವಾಣಿಯಲ್ಲಿ ಅಂಕಣಗಳ ಮೂಲಕ ನೀಡುತ್ತಿದ್ದ ಬರಹಗಳ ಸಂಕಲನ. ಕಗ್ಗದ ನವನೀತ ಎಂಬುದು ಕೃತಿಯ ಉಪಶೀರ್ಷಿಕೆ ಆಗಿದೆ. ಖ್ಯಾತ ವಿದ್ವಾಂಸ ಡಿ.ವಿ. ಗುಂಡಪ್ಪನವರು ಮಂಕುತಿಮ್ಮನ ಕಗ್ಗ ಕೃತಿಯ ಮೂಲಕ ಜೀವನಾಮೃತದ ಚೌಪದಿಗಳನ್ನು ರಚಿಸಿದ ಖ್ಯಾತಿ ಅವರಿಗಿದೆ. ಈ ಚೌಪದಿಗಳು ಬದುಕಿನ ಸತ್ಯವನ್ನು, ಸೌಂದರ್ಯವನ್ನು ತೋರುತ್ತವೆ. ಅದನ್ನು ಅನುಭವಿಸುವ ಬಗೆಯನ್ನೂ ತಿಳಿಸಿಕೊಡುತ್ತವೆ. ಈ ಚೌಪದಿಗಳನ್ನು ಅರ್ಥೈಸಿ, ವಿವರಿಸುವುದು ಅಂಕಣದ ವಿಶೇಷವಾಗಿತ್ತು. ಈ ಎಲ್ಲ ಅಂಕಣ ಬರಹಗಳನ್ನು ಸಂಗ್ರಹಿಸಿ, ಸಂಪಾದಿಸಿದ ಕೃತಿ-ಬೆರಗಿನ ಬೆಳಕು, ಭಾಗ-1.
©2024 Book Brahma Private Limited.