‘ಬೇರು ಬದುಕು’ ಲೇಖಕ ನರೇಂದ್ರ ರೈ ದೇರ್ಲ ಅವರ ಅಂಕಣ ಬರಹಗಳ ಸಂಕಲನ. ದಟ್ಟ ಅಡವಿಯ ಘನತೆ ಮತ್ತು ಸೌಂದರ್ಯಕ್ಕೆ ಸಾವಿರದ ಹೊಗಳಿಕೆ, ವಿವರಣೆ ಇರಬಹುದು, ಆದರೆ ಈ ಅಡವಿಯ ಘನತೆಗೆ ಕಾರಣವಾದ ಮಣ್ಣಿನೊಳಗೆ ಕಾಣದೇ ಇರುವ ಮರಗಳ ಬೇರುಗಳ ಗೋಳು ಕೇಳುವವರಾರು?. ಸಮಾಜ, ಪ್ರಕೃತಿ ಎಷ್ಟೇ ಪ್ರಬಲ ಆಗಿದ್ದರೂ ಉಳಿವಿಗೆ, ಒಳಿತಿಗೆ ಪರಿತಪಿಸುವ ಗಾತ್ರ. ಗೋತ್ರಕ್ಕಿಂತ ರಕ್ಷಣೆಯ ಸೂತ್ರ ಮುಖ್ಯವಾಗಿರುತ್ತದೆ. ಲೇಖಕ ನರೇಂದ್ರ ರೈ ದೇರ್ಲ ಅವರು ಇಂಥದ್ದೇ ಒಂದು ನೆಲೆಗಟ್ಟಿನಲ್ಲಿ ನೆಲ, ಜಲ, ಕೃಷಿ, ಸಮಾಜ, ಪ್ರಕೃತಿಯ ಬಗ್ಗೆ ಗೋಚರವಾಗುವ ವಿಚಾರಗಳನ್ನು ತಮ್ಮ ಲೇಖನಗಳ ಮೂಲಕ ಬೇರು ಬದುಕು ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ಕೃಷಿ, ಸಮಾಜ, ಪ್ರಕೃತಿ ಎಲ್ಲವನ್ನೂ ಬಹಳ ಆಳವಾಗಿ, ಸೂಕ್ಷ್ಮವಾಗಿ ಕಂಡಂತಹ ನರೇಂದ್ರ ರೈ ದೇರ್ಲ ಅವರು ಈ ಕೃತಿಯಲ್ಲಿ ಸಡಿಲಗೊಂಡ ಬೇರುಗಳು ಗಟ್ಟಿಯಾಗಬೇಕಾದರೆ ಮಣ್ಣು ಕೂಡಾ ಮೆದು ಆಗದೇ ಗಡಸು ಆಗಬೇಕು. ಅಂದರೆ ಸಮಾಜದ ಜನತೆ ಕೂಡಾ ನ್ಯಾಯದ ಪರ ಕೈ ಎತ್ತಬೇಕು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
©2024 Book Brahma Private Limited.