ಲೇಖಕ ಹಾಗೂ ಉದ್ಯಮಿ ಪಿ. ಸದಾನಂದ ಮಯ್ಯ ಅವರ ಕೃತಿ-ಬೆಳ್ಳಿತಟ್ಟೆ. ಪತ್ರಕರ್ತ ವಿಶ್ವೇಶ್ವರ ಭಟ್ ಕೃತಿಯ ಕುರಿತು ‘ಕಾರ್ಯಪ್ರೀತಿ, ಶ್ರದ್ಧೆ, ಶ್ರಮ, ಹುಚ್ಚು, ಹಂಬಲ ಹಠ ಇವೆಲ್ಲವೂ ಒಂದೇಪ್ರಮಾಣದಲ್ಲಿ ರೆಡಿಮಿಸ್ಸ್ ಆದರೆ ಒಬ್ಬ ಸದಾನಂದ ಮಯ್ಯ ಆಗುತ್ತಾರೆ. ಆಹಾರ ತಯಾರಿಕೆಯಲ್ಲಿ ಏನೆಲ್ಲ ಮಾಡಬಹುದೋ ಅವೆಲ್ಲವನ್ನು ಸದಾನಂದ ಮಯ್ಯ ಮಾಡಿ ತೋರಿಸಿದ್ದಾರೆ. ‘ಇದೊಂದನ್ನು ನೀವು ಮಾಡಿಲ್ಲ’ ಅಂತ ಅವರಿಗೆ ಹೇಳುದಂತಿಲ್ಲ. ಅಡಿಗೆಮನೆಯಲ್ಲೊಂದು ಕ್ರಾಂತಿಯನ್ನೇ ಮಾಡಿದ ಅವರು ‘ಆಹಾರ-ವಿಹಾರ’ ‘ಬೆಳ್ಳಿತಟ್ಟೆ’ ಎಂಬ ಹೆಸರಿನಲ್ಲಿ ಅಂಕಣರೂಪದಲ್ಲಿ ಬರೆದ ಈ ಬರಹಗಳ ರುಚಿಯನ್ನು ಹಿರಿಯೇ ಅನುಭವಿಸಬೇಕು’ ಎಂದು ಪ್ರಶಂಸಿಸಿದ್ದರೆ, ಪತ್ರಕರ್ತ ರಾಧಾಕೃಷ್ಣ ಬಡ್ತಿ ‘ಸದಾನಂದ ಮಯ್ಯ! ಆಹಾರ ಜಗತ್ತನ್ನು ಈ ಸರಿ ಆವರಿಸಿಕೊಂಡಿರುವ ಇನ್ನೊಬ್ಬ ವ್ಯಕ್ತಿಯನ್ನು ನೋಡಲು ದೇಶಿಯ ಸನ್ನಿವೇಶದಲ್ಲಿ ಸಾಧ್ಯವೇ ಇಲ್ಲ. ಅದೊಂದು ಶಕ್ತಿಯೋ ಯುಕ್ತಿಯೋ ನೈಪುಣ್ಯವೋ ಶ್ರದ್ಧೆಯೋ ಸಮರ್ಪಣೆಯೋ ಶಿಸ್ತೋ ಬದ್ಧತೆಯೋ ಕಾಳಜಿಯೋ ಅಥವಾ ಅವೆಲ್ಲದರ ಸಂಗಮವೋ!’ ಎಂದು ಶ್ಲಾಘಿಸಿದ್ದಾರೆ.
ಡಾ. ಪಿ. ಸದಾನಂದ ಮಯ್ಯ ಅವರು ಮೂಲತಃ ಉಡುಪಿ ಜಿಲ್ಲೆಯ ಪಾರಂಪಳ್ಲಿಯವರು. ಆಹಾರ ತಿನಿಸುಗಳ ಉದ್ಯಮಿ. ಓದಿದ್ದು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್. ಮಯ್ಯಾಸ್ ಕುರುಕಲು ತಿಂಡಿ ಆಹಾರ ಘಟಕದ ಕಾರ್ಖಾನೆ ಹೊಂದಿದ್ದು, . ಧಿಡೀರ್ ತಿನಿಸುಗಳ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರ ಮಾಡಿದ್ದಾರೆ. ವಿವಿಧ ಸುವಾಸನೆಯ, ಆಹಾರ ಪದಾರ್ಥಗಳ ಐಸ್ ಕ್ರೀಂ ಗಳನ್ನು ತಯಾರಿಸಿದ್ದಾರೆ. ಎಂ.ಟಿ.ಆರ್ ಬ್ರ್‍ಯಾಂಡ್ ನ ಕುರುಕುಲು ಆಹಾರ ಪದಾರ್ಥಗಳು ಜಗತ್ತಿನೆಲ್ಲೆಡೆ ಪೂರೈಕೆಯಾಗುತ್ತಿವೆ. ಕೆನಡಾದ ಕ್ಯೂಬೆಕ್ ನಗರದಲ್ಲಿ ವಿಚಾರ ಸಂಕಿರಣದಲ್ಲಿ ಫುಡ್ ಪ್ಯಾಕೇಜಿಂಗ್ ನಲ್ಲಿ ನ್ಯಾನೋ ತಂತ್ರಜ್ಙನ ಬಳಕೆ’ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಕೇಂದ್ರ (2001) ರಕ್ಷಣಾ ಇಲಾಖೆಯಿಂದ ಪ್ರಶಸ್ತಿ, ಬಿಜಿನೆಸ್ ಟು ಡೆ ...
READ MORE