’ವಾರ್ತಾಭಾರತಿ’ ಪತ್ರಿಕೆಗಾಗಿ ಕವಯತ್ರಿ, ಚಿಂತಕಿ ಜ್ಯೋತಿ ಗುರುಪ್ರಸಾದ್ ಅವರು ಬರೆದ ಅಂಕಣಗಳ ಮೊದಲ ಭಾಗ ’ಜೋಲಿ ಲಾಲಿ’. ಪತ್ರಿಕೆಯ ಸಂಪಾದಕ ಬಿ.ಎಂ. ಬಷೀರ್ ಅವರ ಒತ್ತಾಸೆಯಿಂದಾಗಿ ಈ ಬರಹಗಳು ಮೂಡಿಬಂದವು ಎಂದು ಅಂಕಣಕಾರ್ತಿ ಹೇಳಿಕೊಂಡಿದ್ದಾರೆ. ಸಂತ ಶಿಶುನಾಳ ಶರೀಫರ ಆಲೋಚನಾ ಕ್ರಮ ಈ ಅಂಕಣ ಬರಹಗಳ ರಚನೆಗೆ ಸ್ಫೂರ್ತಿಯಂತೆ.
ಸ್ವಾರಸ್ಯಕರ ಸಂಗತಿ ಎಂದರೆ ಮೊದಮೊದಲು ಇಲ್ಲಿನ ಅಂಕಣಗಳನ್ನು ವಿರೋಧಿಸುತ್ತಿದ್ದ ಚಿಂತಕ ಪಟ್ಟಾಭಿರಾಮ ಸೋಮಯಾಜಿ ಕೂಡ ಕಡೆಕಡೆಗೆ ಇವುಗಳ ಪ್ರಾಮಾಣಿಕ ಅಭಿವ್ಯಕ್ತಿಯನ್ನು ಕಂಡು ಖುಷಿಗೊಂಡಿರುವುದನ್ನು ಲೇಖಕಿ ಸ್ಮರಿಸಿದ್ದಾರೆ.
2009ರಿಂದ 2010ರ ನಡುವೆ ಪ್ರಕಟಗೊಂಡ ಅಂಕಣ ಬರಹಗಳ ಸಂಗ್ರಹ ಇದು. ಇದಲ್ಲದೆ ಎರಡನೇ ಭಾಗ ಕೂಡ ಪ್ರಕಟಗೊಂಡಿದೆ.
ಸೂಕ್ಷ್ಮ ಸಂವೇದನೆಯಿಂದ ಬರೆಯುವ ಜ್ಯೋತಿ ಗುರುಪ್ರಸಾದ್ (1965) ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಆರ್.ಜ್ಯೋತಿ ಎಂಬ ಹೆಸರಿನ ಇವರ ಕಾವ್ಯನಾಮ ಜ್ಯೋತಿ ಗುರುಪ್ರಸಾದ. ಟಿ. ನರಸೀಪುರ ಮೂಲದವರಾದ ಅವರು ಟಿ. ನರಸೀಪುರ, ಮಂಡ್ಯ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಗೃಹಸ್ಥ ಜೀವನಕ್ಕೆ ಕಾಲಿಟ್ಟು ಕಾರ್ಕಳಕ್ಕೆ ಬಂದರು. ಕಾರ್ಕಳದ ಭುವನೇಂದ್ರ ಕಾಲೇಜು, ಕ್ರೈಸ್ಟ್‌ಕಿಂಗ್ ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಕಾರ್ಕಳದ ಎಸ್.ವಿ.ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜ್ಯೋತಿ ಅವರ ಮೊದಲ ಕವನ ಸಂಕಲನ’ಚುಕ್ಕಿ’ ...
READ MORE