ಮಿಹಿರಕುಲಿ

Author : ಸದ್ಯೋಜಾತ ಭಟ್ಟ

Pages 224

₹ 250.00




Year of Publication: 2021
Published by: ಸಮನ್ವಿತ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಸದ್ಯೋಜಾತ ಭಟ್ಟ ಅವರು ಬರೆದ ಕೃತಿ-ಮಿಹಿರಕುಲಿ. ಮೊಘಲ್ ವಂಶದ ಚರಿತ್ರೆ, ಭಾರತಕ್ಕೆ ‌ದಾಳಿ ನಡೆಸಿದ ಮುಸ್ಲಿಂ ದಾಳಿಕೋರರು‌‌, ದೆಹಲಿ ಮತ್ತು ಭಾರತದ ವಿಭಿನ್ನತೆ , ಕುತುಬ್ ಮಿನಾರ್ ಕಟ್ಟಡದ ಇತಿಹಾಸ ಹೀಗೆ ವೈವಿಧ್ಯಮಯ ವಿಚಾರ-ವಿಷಯಗಳನ್ನು ಒಳಗೊಂಡ ಅಂಕಣಗಳ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ. ವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಎಚ್ಚರ, ಓದಿಸಿಕೊಂಡು ಹೋಗುವ ಸರಳ ಭಾಷೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕೃತಿಯು ಓದಿಗರ ಗಮನ ಸೆಳೆಯುತ್ತದೆ.

About the Author

ಸದ್ಯೋಜಾತ ಭಟ್ಟ

ಲೇಖಕ, ಸಂಶೋಧಕ ಸದ್ಯೋಜಾತ ಭಟ್ಟ ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ಕನ್ನಡ ಪಂಡಿತರಾದ ಅವರು ಶಾಸನಗಳ ಅಧ್ಯಯನ ಮತ್ತು ಶಾಸನಗಳ ಪದಕೋಶಗಳ ರಚನೆಯ ಜೊತೆಗೆ ಶಾಸನಗಳಲ್ಲಿ ಬಳಸಲ್ಪಟ್ಟ ಲಿಪಿಗಳ ಅಧ್ಯಯನ ನಡೆಸಿದ್ದಾರೆ. ಖರೋಷ್ಟಿ, ಬ್ರಾಹ್ಮಿ, ಶಾರದಾ, ನಾಗರೀ ನಂದಿನಾಗರೀ ಮತ್ತು ಕನ್ನಡ ಲಿಪಿಗಳ ಲಿಪ್ಯಂತರಣ. ಪ್ರಸ್ತುತ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆರಂಭಗೊಂಡ ಪಾಲಿಯೋಗ್ರಾಫಿ ಮತ್ತು ಮ್ಯಾನ್ಯುಸ್ಕ್ರಿಪ್ಟಾಲಜಿಯಲ್ಲಿ ಬೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ’ಶಿಲೆಗಳಲ್ಲಡಗಿದ ಸತ್ಯ’, ’ನಾಸತ್ಯಾ’ ಅವರ ಕೃತಿಗಳು. ’ಕಾಲಯಾನ’ ಅವರ ಇತ್ತಿಚಿನ ಕೃತಿ. ...

READ MORE

Related Books