ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಗದಗನಿಂದ ಹೊರಡುತ್ತಿದ್ದ‘ಕಿತ್ತೂರು ಕರ್ನಾಟಕ’ ದಿನಪತ್ರಿಕೆಯಲ್ಲಿ ಬರೆದ ಅಂಕಣಗಳ ಬರೆಹಗಳ 2ನೇ ಭಾಗವಾಗಿ ಇಲ್ಲಿ ಸಂಕಲನಗೊಂಡಿವೆ. ತಮ್ಮ ಬದುಕಿನ ನೋವುಗಳನ್ನು ಮರೆಯಲಿಕ್ಕಾದರೂ ಬೇಂದ್ರೆಯನ್ನು ಓದುತ್ತಿದ್ದರ ಫಲವಾಗಿ ಮೂಡಿದ ವಿಚಾರಗಳನ್ನು ಪತ್ರಿಕಾ ಅಂಕಣಗಳಾಗಿ ಪರಿವವರ್ತನೆಗೊಂಡಿವೆ ಎಂದು ಲೇಖಕರು ಹೇಳಿದ್ದಾರೆ.
ಗಾಯಕ್ಕೆ ಮಾಯಕ್ಕೆ ಇದೇ ಮಲಾಮು ತಲೆಕೆಡಿಸಿಕೊಳ್ಳದಿರು, ಬಂಗಾರ ಮುಟ್ಟಿದ್ದ ಮೈಲಿ, ಶೃಂಗಾರ ಕೆಟ್ಟರ ಸೂತಕ, ಯಾವಚ್ಚಿನಲ್ಲಿ ಮುಚ್ಚಿದೆ ನನ್ನ; ಮೆಚ್ಚುಗೆಗೆ ಬೇರೆ ಮದ್ದಿಲ್ಲ, ನೀವು ತಂದಿ ತಾಯಿ ನಮಗ; ಕಂದನು ನಾ ನಿಮಗ...ಹೀಗೆ ಒಟ್ಟೊ 39 ಅಧ್ಯಾಯಗಳು ಬೇಂದ್ರೆ, ಅವರ ಸಾಹಿತ್ಯ-ಸಂಸ್ಕೃತಿ ಕುರಿತೇ ಬರೆದಿದ್ದು, ವಿಷಯ ನಿರೂಪಣೆಯು ಆಕರ್ಷಣೀಯವಾಗಿದೆ.
ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...
READ MOREಸಮರಸ ಕವಿ, ಬದುಕು ಪ್ರೀತಿಸಿದ ಕವಿ, ಭಾವಜೀವಿ ಕವಿ, ಬೇಂದ್ರೆಯವರ ಕವನದ ಸಾಲುಗಳನು, ಒಳಕೂಗಿನ ಮೂಲಕ ಅರ್ಥೈಸಿಕೊಂಡು ತಿಳಿದು, ಹೊಳೆದ, ಬೆಳೆದ, ಜ್ಞಾನದ ಹೊಳಪಿನ ಹರವನ್ನು ಕನ್ನಡದ ಸಹೃದಯರಿಗೆ ಹಂಚುವ ಮೂಲಕ ಜ್ಞಾನ ಪ್ರಸಾರಗೊಳಿಸಿದ್ದಾರೆ. ಗದಗ ಜಿಲ್ಲೆಯ ಸಾಹಿತ್ಯ ಪರಿಸರದಲ್ಲಿ ಬಹು ಅಪರೂಪದ ವ್ಯಕ್ತಿತ್ವ ಕಟ್ಟಿಕೊಂಡ ಇವರು ಬೇಂದ್ರೆಯವರ ಜನಪದ ಮೂಲದ್ರವ್ಯವನ್ನು ಅರಗಿಸಿಕೊಂಡು ಶಬ್ದ ಶಾರದೆಯ ನಾದಲಯಗಳಲ್ಲಿ ಅವರ ಕಾವ್ಯದ ಝೇಂಕಾರವನ್ನು ಬೇಂದ್ರೆ ಕಾವ್ಯಾಸಕ್ತರಿಗೆ ತಲುಪಿಸುವ ಕಾರ್ಯವನ್ನು ಸಾಹಿತ್ಯ ಪರಿಚಾರಕರಂತೆ ನಿರ್ವಹಿಸುತ್ತಾರೆ. ಸೂಕ್ಷ್ಮ ಮನಸೊಂದು ಬೇಂದ್ರೆ ಲೋಕದಲ್ಲಿ ವಿಹರಿಸಿ ಅದರ ಅದ್ಭುತ ಬಯಲನ್ನು ಶಬ್ದ ಗೊಳಿಸಿದ ಹಿರಿಯ ಸಾಧನೆ ಡಾ. ತಮ್ಮನಗೌಡ್ರ ಅವರದು.
(ಡಾ. ಶರಣಬಸವ ವೆಂಕಟಾಪುರ ಕನ್ನಡ ಪ್ರಾಧ್ಯಾಪಕರು ಕೆ. ಎಸ್. ಎಸ್. ಕಾಲೇಜ ಗದಗ, ಕೃತಿಗೆ ಬರೆದ ಬೆನ್ನುಡಿಯಿಂದ)