ಬದುಕಿನ ಬೆಲೆಯ ಹುಡುಕಾಟವನ್ನು ಅನಾವರಣಗೊಳಿಸುವ ಪುಸ್ತಕ ಇದು. ಮದುವೆ ಮನೆಯಲ್ಲಿ ಕೈತೊಳೆಯದೆ ಬಟ್ಟಲೆತ್ತಿಕೊಂಡು ಊಟ ಮಾಡುವ ವಿಚಾರ, ಕುದುರೆ ವ್ಯಾಪಾರ, ಮನೆಯಲ್ಲಿ ಊಟಕ್ಕೆ ಕಾಯುವ ಪತ್ನಿ ಹೀಗೆ ದೈನಂದಿನ ಬದುಕಿನಲ್ಲಿ ನಾವು ನಿರ್ಲಕ್ಷ್ಯ ಮಾಡುವ ವಿಚಾರಗಳು ಬಹುಮಟ್ಟಿಗೆ ಸಮಸ್ಯೆಗಳನ್ನೇ ತಂದೊಡ್ಡತ್ತವೆ. ಇಂತಹ ಸಂಗತಿಗಳ ಕುರಿತ ಬರೆಹಗಳು ಇಲ್ಲಿ ಸಂಕಲನಗೊಂಡಿವೆ.
ಲೇಖಕ ಚಂದ್ರಶೇಖರ ಪಾತೂರು ಅವರು ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲ್ಲೂಕಿನ ಪಾತೂರು ಗ್ರಾಮದವರು. ಇವರು 1969 ಜೂನ್ 4ರಂದು ಜನಿಸಿದರು. ಬಿ.ಎ. ಪದವೀದರರಾಗಿರುವ ಇವರು ಪ್ರಸ್ತುತ ಸರ್ಕಾರಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ರಚಿಸಿದ ಕತೆ, ಕವನಗಳು ದಿನಪತ್ರಿಕೆ ಹಾಗೂ ವಾರಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ತುಳು ನಾಟಕ, ಹಾಡು ಬರೆಯುವುದು, ಚಿತ್ರರಚನೆ ಪ್ರಮುಖ ಹವ್ಯಾಸಗಳು. ತೀರ್ಪು (ಕತಾ ಸಂಕಲನ) ಮತ್ತು ಬದುಕಿನ ಬೆಲೆಯನೇನಾದರೂ ಬಲ್ಲಿರಾ (ಅಂಕಣ ಬರಹಗಳ ಸಂಕಲನ) ಇವರು ರಚಿಸಿದ ಪ್ರಮುಖ ಕೃತಿಗಳು. ...
READ MORE